ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ದೂರದ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ

Published 27 ಏಪ್ರಿಲ್ 2024, 6:14 IST
Last Updated 27 ಏಪ್ರಿಲ್ 2024, 6:14 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಬಹುದೂರದ ಮತಗಟ್ಟೆಗಳಾದ ಮುಂಡ್ರೋಟ್ ಹಾಗೂ ಕಡಮಕಲ್ಲು ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.

ಇಲ್ಲಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಕೇರಳದ ರಾಜ್ಯ ಪ್ರವೇಶಿಸಿ ತಲುಪಬೇಕಾಗಿರುವ ಮುಂಡ್ರೋಟ್ ಮತಗಟ್ಟೆಯಲ್ಲಿ 42 ಮತದಾರರು ಇದ್ದರು. ಅವರ ಪೈಕಿ 22 ಮತದಾರರು ಮತದಾನ ಮಾಡಿದರು. ಅವರಲ್ಲಿ 17 ಮಂದಿ ಪುರುಷರು ಮತ್ತು ಐವರು ಮಹಿಳೆಯರು ಇದ್ದರು.

ವಲಯ ಅರಣ್ಯಾಧಿಕಾರಿ ಕೊಟ್ರೇಶ್‌ ಮತ್ತು ಅವರ ತಂಡದ ನೇತೃತ್ವದಲ್ಲಿ ಮತದಾನ ಇಲ್ಲಿ ಯಶಸ್ವಿಯಾಗಿ ನಡೆಯಿತು.

ಈಚೆಗಷ್ಟೇ ನಕ್ಸಲರ ಚಲನವಲನಗಳು ಕಂಡು ಬಂದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ತಲುಪಬೇಕಿರುವ ಕಡಮಕಲ್ಲು ಮತಗಟ್ಟೆಯಲ್ಲಿಯೂ ಬಿರುಸಿನ ಮತದಾನ ನಡೆದಿದೆ. ಒಟ್ಟು 188 ಮತದಾರರು ಪೈಕಿ 112 ಮಂದಿ ಮತದಾನ ಮಾಡಿದ್ದಾರೆ. ಶೇ 59.57ರಷ್ಟು ಮತದಾನ ನಡೆದಿದೆ.

ಇಲ್ಲಿ ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ ಮತ್ತು ಅವರ ತಂಡದ ನೇತೃತ್ವದಲ್ಲಿ ಮತದಾನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT