5 ವರ್ಷದ ಹಿಂದೆ ಡಾಂಬರು ಕಂಡಿದ್ದ ರಸ್ತೆ ಭಾರಿ ವಾಹನಗಳು ಸಂಚರಿಸುತ್ತಿದ್ದಾಗ ಮೌನವಾಗಿದ್ದ ಪಂಚಾಯಿತಿ ರಸ್ತೆ ಸರಿಪಡಿಸಲು ಮುಂದಾಗದ ಜನಪ್ರತಿನಿಧಿಗಳು
ಜಾರಿ ಬೀಳುವ ಮಕ್ಕಳು ಸಮವಸ್ತ್ರ ಕೆಸರುಮಯ ಈ ಮಳೆಗಾಲದಲ್ಲಂತೂ ನಮ್ಮ ಪರಿಸ್ಥಿತಿ ಹೇಳತೀರದಾಗಿದೆ. ನಾವು ಬಹುದೂರ ನಡೆದುಕೊಂಡು ಹೋಗುತ್ತಿರುವುದರಿಂದ ಕೆಲವೊಮ್ಮೆ ಶಾಲಾ ಸಮವಸ್ತ್ರಗಳು ಕೆಸರುಮಯವಾಗುತ್ತಿದೆ. ವಾಹನಗಳು ಬಂದಾಗ ರಸ್ತೆ ಬದಿಗೆ ಹೋದಾಗ ಪುಟ್ಟ ಮಕ್ಕಳು ಜಾರಿ ಬಿದ್ದ ಉದಾಹರಣೆಗಳೂ ಇವೆ. ಕೂಡಲೇ ರಸ್ತೆ ಸರಿಪಡಿಸಿ.
ವರುಣ್ ನವೀನ್ ಹಾಗೂ ಇತರ ವಿದ್ಯಾರ್ಥಿಗಳು ಗುಂಡುಗುಟ್ಟಿ ಗ್ರಾಮ.
ದಯವಿಟ್ಟು ಸರಿಪಡಿಸಿರಿ ಈ ರಸ್ತೆಯು ಸಂಪೂರ್ಣ ಗುಂಡಿಮಯವಾಗಿದೆ. ನಡೆದಾಡಲು ಸಾದ್ಯವಾಗುತ್ತಿಲ್ಲ. ವಾಹನಗಳು ಬಂದರಂತೂ ನಮ್ಮ ಅವಸ್ಥೆ ಹೇಳಲು ಸಾಧ್ಯವಿಲ್ಲ. ದಯವಿಟ್ಟು ಈ ರಸ್ತೆ ಸರಿಪಡಿಸಿ ಜನರ ಸಮಸ್ಯೆ ಹೋಗಲಾಡಿಸಿ.