ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಟೆ ಭಗವತಿ ದೇವರ ಉತ್ಸವ ಸಂಪನ್ನ

Published 25 ಮೇ 2024, 4:53 IST
Last Updated 25 ಮೇ 2024, 4:53 IST
ಅಕ್ಷರ ಗಾತ್ರ

ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ದೇವಿ ಉತ್ಸವ ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು.

ದೇವಿಯನ್ನು ರಾಟೆಯ ಉಯ್ಯಾಲೆಯಲ್ಲಿ ತೂಗುವ ವಿಶಿಷ್ಟ ಆಚರಣೆಯಲ್ಲಿ ಆಧಿಕ ಸಂಖ್ಯೆಯ ಗ್ರಾಮಸ್ಥರು ಪಾಲ್ಗೊಂಡಿದ್ದರು. ಬಲ್ಲಮಾವಟಿ, ಪೇರೂರು, ಹಾಗೂ ಪುಲಿಕೋಟು ಗ್ರಾಮಗಳ ವ್ಯಾಪ್ತಿಗೆ ಸೇರಿದ ಬಲ್ಲತ್ತನಾಡಿನ ಪುರಾತನ ಭಗವತಿ ಭದ್ರಕಾಳಿ ದೇವಾಲಯದಲ್ಲಿ ಈ ಉತ್ಸವಕ್ಕಾಗಿ ದೇವಾಲಯದ ಮುಂಭಾಗದಲ್ಲಿ ದೊಡ್ಡ ಕಬ್ಬಿಣದ ರಾಟೆ ನಿರ್ಮಿಸಲಾಗಿದೆ.

ಹಲವಾರು ವರ್ಷಗಳಿಂದ ಈ ಭಾಗದ ಜನರ ನಂಬಿಕೆ ಪ್ರತೀಕವಾಗಿ ನಡೆದುಕೊಂಡು ಬಂದ ರಾಟೆ ಉಯ್ಯಾಲೆ ಹಬ್ಬ ಎರಡು ವರ್ಷಕ್ಕೊಮ್ಮೆ ನಡೆಯುತ್ತಿದ್ದು ಉತ್ಸವವು ಈ ವರ್ಷ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು. ಭಕ್ತರು ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಹಾಗೂ ಸಾಂಪ್ರದಾಯಿಕ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದರು.

ಉತ್ಸವದ ಅಂಗವಾಗಿ ಭದ್ರಕಾಳಿ ಅಮ್ಮನ ವಿಗ್ರಹವನ್ನು ರಾಟೆ ಉಯ್ಯಾಲೆಯಲ್ಲಿ ತೂಗುವುದು ಮಾತ್ರವಲ್ಲದೆ ಬೇಡು ಹಬ್ಬ, ಪೀಲಿಯಾಟ್ ಮುಂತಾದ ಸಾಂಪ್ರದಾಯಿಕ ಆಚರಣೆಗಳು ಜರುಗಿದವು.

ಬಲ್ಲಮಾವಟಿ ಮತ್ತು ಪುಲಿಕೋಟು ಭಾಗಗಳಿಂದ ಆಗಮಿಸಿದ ಮೂರು ಕೋಲಗಳನ್ನು ಭಕ್ತರು ವೀಕ್ಷಿಸಿ ಸಂಭ್ರಮಿಸಿದರು.  ಸುತ್ತಮುತ್ತಲಿನ ಗ್ರಾಮಗಳ ಜನರ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯ ವೃದ್ದಿಗಾಗಿ ಈ ಹಬ್ಬ ಆಚರಿಸಲಾಗುತ್ತದೆ.  

‘ಎತ್ತುಪೋರಾಟ, ವೇಷ ಧರಿಸಿ ನರ್ತಿಸುವ ಬೇಡು ಹಬ್ಬ, ವೇಷ ಬದಲಿಸಿ ಹರಕೆ ಒಪ್ಪಿಸುವ ಆಂಗೋಲ-ಪೊಂಗೋಲ ದಂತಹ ವಿಶೇಷ ಆಚರಣೆಗಳು ನಡೆಯುತ್ತವೆ. ಗ್ರಾಮಸ್ಥರ ನೆರವಿನಿಂದ ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು’ ಎಂದು ಗ್ರಾಮಸ್ಥ ಭೀಮಯ್ಯ ತಿಳಿಸಿದರು.

ಸಂಜೆ ಕ್ಷೇತ್ರಪಾಲ, ಶಾಸ್ತಾವು ಹಾಗೂ ಭದ್ರಕಾಳಿ ಕೋಲಗಳು ನಡೆದವು. ಬೋಡ್ ಉತ್ಸವದಲ್ಲಿ ತಕ್ಕ ಮುಖ್ಯಸ್ಥರು, ನಾಡಿನ ಭಕ್ತರು, ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಉತ್ಸವದ ಅಂಗವಾಗಿ ಭದ್ರಕಾಳಿ ದೇವರ ವಿಗ್ರಹವನ್ನು ಅಲಂಕರಿಸಲಾಗಿತ್ತು.
ಉತ್ಸವದ ಅಂಗವಾಗಿ ಭದ್ರಕಾಳಿ ದೇವರ ವಿಗ್ರಹವನ್ನು ಅಲಂಕರಿಸಲಾಗಿತ್ತು.
ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ದೇವಿಯ ಉತ್ಸವದಲ್ಲಿ ವೇಷ ಧರಿಸಿ ಭಕ್ತರು ನರ್ತಿಸಿದರು.
ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ದೇವಿಯ ಉತ್ಸವದಲ್ಲಿ ವೇಷ ಧರಿಸಿ ಭಕ್ತರು ನರ್ತಿಸಿದರು.
ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ದೇವಿಯ ಉತ್ಸವದಲ್ಲಿ ಶುಕ್ರವಾರ ದೇವಿಯ ವಿಗ್ರಹವನ್ನು ರಾಟೆಯಲ್ಲಿ ತೂಗಲಾಯಿತು.
ನಾಪೋಕ್ಲು ಸಮೀಪದ ಬಲ್ಲಮಾವಟಿ ಗ್ರಾಮದ ರಾಟೆ ಭಗವತಿ ದೇವಿಯ ಉತ್ಸವದಲ್ಲಿ ಶುಕ್ರವಾರ ದೇವಿಯ ವಿಗ್ರಹವನ್ನು ರಾಟೆಯಲ್ಲಿ ತೂಗಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT