ಸಾಮಾಜಿಕ ಜಾಲತಾಣ: ಇತಿಮಿತಿ ಬಳಕೆ ಅಗತ್ಯ

7

ಸಾಮಾಜಿಕ ಜಾಲತಾಣ: ಇತಿಮಿತಿ ಬಳಕೆ ಅಗತ್ಯ

Published:
Updated:
Deccan Herald

ಮಡಿಕೇರಿ: ‘ಯುವಜನರು ಸಾಮಾಜಿಕ ಜಾಲತಾಣಗಳನ್ನು ಇತಿಮಿತಿಯಲ್ಲಿ ಬಳಸಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ಕಿವಿಮಾತು ಹೇಳಿದರು.

ನಗರದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ನಡೆದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಮೊಬೈಲ್, ಅಂತರ್ಜಾಲ, ವಾಟ್ಸ್ ಆ್ಯಪ್‌, ಫೇಸ್‍ಬುಕ್, ಟ್ವಿಟರ್.. ಹೀಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಹೆಚ್ಚಾಗಿದೆ. ಇದರಿಂದ ಮಾನಸಿಕ ಸ್ಥಿಮಿತತೆ ಕಡಿಮೆಯಾಗುತ್ತಿದ್ದು, ಈ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಹೇಳಿದರು.

ಪ್ರತಿಯೊಬ್ಬರೂ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮನಸು ಸಕಾರಾತ್ಮಕವಾಗಿ ಇರಬೇಕು ಎಂದು ಸಲಹೆ ಮಾಡಿದರು.

ಡಿವೈಎಸ್‌ಪಿ ಸುಂದರರಾಜ್ ಮಾತನಾಡಿ, ‘ಮಾನಸಿಕವಾಗಿ ಸದೃಢರಾಗಲು ಯೋಗ, ವ್ಯಾಯಾಮ, ಸಂಗೀತ, ಸಾಹಿತ್ಯ, ಪುಸ್ತಕ, ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಮನೋವೈದ್ಯೆ ಡಾ.ಲಿನೇಕರ್ ಕರ್ಕಡ, ಯುವ ಸ್ಪಂದನ ಮನಃಶಾಸ್ತ್ರಜ್ಞ ಪುಟ್ಟರಾಜು, ಪ್ರಾಂಶುಪಾಲರಾದ ಕೆ.ಕೆ. ಮಹೇಶ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !