ಸೋಮವಾರಪೇಟೆ: ಮಾಗಡಿ - ಜಾಲ್ಸುರು ರಾಜ್ಯ ಹೆದ್ದಾರಿ 85ರಲ್ಲಿ ಸೋಮವಾರಪೇಟೆಯ ಅಲೆಕಟ್ಟೆ - ತೋಳುರುಶೆಟ್ಟಳ್ಳಿ - ಕೂತಿ ಮಾರ್ಗ ₹20 ಕೋಟಿ ವೆಚ್ಚದಲ್ಲಿ ವಿಸ್ತರಣೆ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಕೂತಿ ಗ್ರಾಮಸ್ಥರು ಇಂದು ಕೆಲಸವನ್ನು ಮಂಗಳವಾರ ತಡೆಯಲು ಮುಂದಾದರು.

ಸೋಮವಾರಪೇಟೆ -ಕೂತಿ ಮಾರ್ಗದ ಅಲೆಕಟ್ಟೆ - ಹರಪಳ್ಳಿ ವರೆಗೆ 8 ಕಿ ಮೀ ರಸ್ತೆಯನ್ನು ಜನವರಿ ತಿಂಗಳಿನಲ್ಲಿ ಮ್ಯಾಪಿಂಗ್ ಮಾಡಲಾಗಿತ್ತು. ಆದರೆ, 2.3 ಕಿ.ಮೀ. ರಸ್ತೆಯಲ್ಲಿ ಮಾತ್ರ ಕೆಲಸ ನಡೆಯುತ್ತಿದೆ. ಗುತ್ತಿಗೆದಾರ ಯೋಜನಾ ವರದಿಯಂತೆ ಕೆಲಸ ನಿರ್ವಹಿಸದೆ ತಮ್ಮ ಇಷ್ಟದಂತೆ ಕೆಲಸ ಮಾಡುತ್ತಿದ್ದು ಕಾಮಗಾರಿಗೆ ಗುಣಮಟ್ಟದ ಸಾಮಾಗ್ರಿಗಳನ್ನು ಬಲಸದೆ, ಸಂಪೂರ್ಣ ಕಳಪೆಯಾಗಿದೆ. ತಕ್ಷಣದಿಂದಲೆ ಇದನ್ನ ನಿಲ್ಲಿಸಿ ಯೋಜನಾ ವರದಿಯಂತೆ ಕಾಮಗಾರಿ ಮಾಡಬೇಕು. ಸಂಬಂಧ ಪಟ್ಟ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನಡೆಸಬೇಕು ಇಲ್ಲವಾದಲ್ಲಿ ಸೋಮವಾರ ಇಲ್ಲಿನ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕೂತಿ ಗ್ರಾಮಸ್ಥರು ಎಚ್ಚರಿಸಿದರು.

ಸಾಮಾಜಿಕ ಕಾರ್ಯಕರ್ತ ಬಗ್ಗನ ಅನಿಲ್, ಕೂತಿ ಗ್ರಾಮಧ್ಯಕ್ಷ ಎಚ್.ಎಂ. ಜಯರಾಮ್, ಉಪಾಧ್ಯಕ್ಷ ಕೆ.ಡಿ.ಗಿರೀಶ್, ಕಾರ್ಯದರ್ಶಿ ಯಾದವ್ ಕುಮಾರ್, ಚೌಡ್ಲು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಪರಮೇಶ್, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಂ.ದಿನೇಶ್ ಸೇರಿದಂತೆ ಕೂತಿ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.