ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ದಾಟಿತು 38 ಡಿಗ್ರಿ ತಾಪಮಾನ

ಮತ್ತಷ್ಟು ಉಷ್ಣಾಂಶ ಹೆಚ್ಚುವ ಎಚ್ಚರಿಕೆ; ಬಸವಳಿಯುತ್ತಿದ್ದಾರೆ ಕೊಡಗಿನ ಜನ
Published 1 ಮೇ 2024, 5:35 IST
Last Updated 1 ಮೇ 2024, 5:35 IST
ಅಕ್ಷರ ಗಾತ್ರ

ಮಡಿಕೇರಿ: ರಾಜ್ಯದ ಇತರೆ ಜಿಲ್ಲೆಗಳಂತೆ ಕೊಡಗಿನಲ್ಲೂ ತಾಪಮಾನ ಹೆಚ್ಚುತ್ತಿದೆ. ತಂಪು ಜಿಲ್ಲೆ ಎಂಬ ಖ್ಯಾತಿ ತೆರೆಮರೆಗೆ ಸರಿಯುತ್ತಿದ್ದು, ಬೇಸಿಗೆಯ ಬಿಸಿಯಲ್ಲಿ ಜನರು ಬಸವಳಿಯುತ್ತಿದ್ದಾರೆ.

ಏಪ್ರಿಲ್ 29ರ ಬೆಳಿಗ್ಗೆ 8.30ರಿಂದ ಏಪ್ರಿಲ್ 30ರ ಬೆಳಿಗ್ಗೆ 8.30ತರ ಅವಧಿಯಲ್ಲಿ ಕೊಡಗಿನಲ್ಲಿ ದಾಖಲಾದ ಗರಿಷ್ಠ ತಾಪಮಾನ ಬರೋಬರಿ 38.6. ಕನಿಷ್ಠ ತಾಪಮಾನ 23.5. ಇತ್ತೀಚಿನ ವರ್ಷಗಳಲ್ಲಿ ಇಷ್ಟು ಹೆಚ್ಚಿನ ತಾಪಮಾನ ದಾಖಲಾಗಿರಲಿಲ್ಲ.

ಮುಂದಿನ ಕೆಲವು ದಿನಗಳಲ್ಲೂ ತಾಪಮಾನ ಇಳಿಕೆಯಾಗುವ ಸೂಚನೆಗಳು ಇಲ್ಲ. ಬಿಸಿಗಾಳಿ ಹಾಗೂ ಒಣಹವೆಯ ವಾತಾವರಣವೇ ಮುಂದುವರಿಯುವುದರಿಂದ ತಾಪಮಾನ ಇನ್ನಷ್ಟು ಏರಿಕೆಯಾಗುವ ಸಂಭವಗಳೇ ಅಧಿಕ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT