ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಕಳವು: ಆರೋಪಿ ಬಂಧನ

Published 11 ಫೆಬ್ರುವರಿ 2024, 7:06 IST
Last Updated 11 ಫೆಬ್ರುವರಿ 2024, 7:06 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಪಟ್ಟಣದಲ್ಲಿ ಜ.28ರ ತಡರಾತ್ರಿ ಸರಣಿ ಕಳವು ನಡೆಸಿದ್ದ ಆರೋಪಿ ಪುತ್ತೂರಿನ ಚಿಕ್ಕಮಳ್ಳೂರು ಗ್ರಾಮದ ನಿವಾಸಿ ಮಹಮದ್ ಆಶ್ರಫ್ (39) ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ.

ಪಟ್ಟಣದಲ್ಲಿ ಸರಣಿ ಕಳವು ನಡೆಸಿ ವ್ಯಾಪಾರಸ್ಥರು ಸೇರಿದಂತೆ ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡಿದ್ದ ಈ ಪ್ರಕರಣವನ್ನು 13 ದಿನಗಳಲ್ಲೆ ಭೇದಿಸುವಲ್ಲಿ ಸುಂಟಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್,  ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ಸಿಪಿಐ ಕೆ.ರಾಜೇಶ್ ಕೋಟ್ಯಾನ್ ಅವರ ಮಾರ್ಗದರ್ಶನದಲ್ಲಿ ಸುಂಟಿಕೊಪ್ಪ ಪಿಎಸ್ಐ ಎಂ.ಸಿ.ಶ್ರೀಧರ್, ಅಪರಾಧ ಪತ್ತೆ ದಳದ ಪಿಎಸ್‌ಐ ನಾಗರಾಜ್, ಹೆಡ್‌ಕಾನ್‌ಸ್ಟೆಬಲ್ ಸತೀಶ್, ಕಾನ್‌ಸ್ಟೆಬಲ್‌ಗಳಾದ ಜಗದೀಶ್, ಉದಯ್, ಪ್ರವೀಣ್ ಮತ್ತು ರಂಜೀತ್ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT