ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌: ಬೆಮಲ್‌ನ ನಿವೃತ್ತ ನೌಕರನ ಹಣ ದೋಚಿದ ದುಷ್ಕರ್ಮಿಗಳು

Published 7 ಫೆಬ್ರುವರಿ 2024, 14:25 IST
Last Updated 7 ಫೆಬ್ರುವರಿ 2024, 14:25 IST
ಅಕ್ಷರ ಗಾತ್ರ

ಕೆಜಿಎಫ್‌: ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ವ್ಯಕ್ತಿಯೊಬ್ಬರು ಬರುತ್ತಿರುವಾಗ ಹಿಂಬಾಲಿಸಿದ ದುಷ್ಕರ್ಮಿಗಳು ಡ್ರಾ ಮಾಡಿದ ಹಣವನ್ನು ದೋಚಿರುವ ಘಟನೆ ಬುಧವಾರ ರಾಬರ್ಟಸನ್‌ಪೇಟೆಯಲ್ಲಿ ನಡೆದಿದೆ.

ಬೆಮಲ್‌ ನಿವೃತ್ತ ನೌಕರ ಬೂಬಾಲನ್‌, ಮುಂಜಾನೆ ಕೆನರಾ ಬ್ಯಾಂಕಿನಿಂದ ₹3.40 ಲಕ್ಷ ಹಣ ಡ್ರಾ ಮಾಡಿಕೊಂಡರು. ಅದನ್ನು ತಮ್ಮ ಬೈಕಿನ ಹ್ಯಾಂಡಲ್ ಬಳಿ ನೇತು ಹಾಕಿದ್ದರು. ನಂತರ ತರಕಾರಿ ತೆಗೆದುಕೊಳ್ಳಲು ಬೈಕ್ ನಿಲ್ಲಿಸಿದರು. ತರಕಾರಿ ತೆಗೆದುಕೊಂಡು ನೋಡುವಷ್ಟರಲ್ಲಿ ಬೈಕಿನಲ್ಲಿದ್ದ ಹಣ ಇರಲಿಲ್ಲ. ಬೈಕಿನಲ್ಲಿ ಇಬ್ಬರು ವ್ಯಕ್ತಿಗಳು ಬೂಬಾಲನ್ ಅವರನ್ನು ಬ್ಯಾಂಕಿನಿಂದ ಹಿಂಬಾಲಿಸಿಕೊಂಡು ಬಂದು ಹಣ ದೋಚಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಆರೋಪಿಗಳ ಖಚಿತ ಮಾಹಿತಿ ದೊರೆತಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಬರ್ಟಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT