ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ

Published 11 ಡಿಸೆಂಬರ್ 2023, 13:05 IST
Last Updated 11 ಡಿಸೆಂಬರ್ 2023, 13:05 IST
ಅಕ್ಷರ ಗಾತ್ರ

ಮುಳಬಾಗಿಲು: ಕಡೆಯ ಕಾರ್ತಿಕ ಸೋಮವಾರದ ಪ್ರಯುಕ್ತ ನಗರದ ಪ್ರಸನ್ನ ಸೋಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಲಕ್ಷ ದೀಪೋತ್ಸವ ನಡೆಯಿತು.

ಸಾವಿರಾರು ವರ್ಷಗಳ ಇತಿಹಾಸವಿರುವ ನಗರದ ಸೋಮೇಶ್ವರ ಪಾಳ್ಯದಲ್ಲಿರುವ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಾರಂಭದಿಂದಲೂ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಜಾತ್ರಾ ಮಹೋತ್ಸವ ನಡೆಯಿತು. ಸೋಮವಾರ ಕಡೆಯ ಕಾರ್ತಿಕ ಮಾಸದ ಪ್ರಯುಕ್ತ ಲಕ್ಷ ದೀಪೋತ್ಸವ ನಡೆಯಿತು. ಇದರ ಅಂಗವಾಗಿ ದೇವಾಲಯ ಹಾಗೂ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ಬೆಳಿಗ್ಗೆಯಿಂದ ಅಭಿಷೇಕ, ಹೋಮ, ಪಂಚಾಮೃತ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಸಂಜೆ ದೇವಾಲಯದಲ್ಲಿ ಒಂದು ಲಕ್ಷ ಮಣ್ಣಿನ ಹಣತೆ ಹಾಗೂ ವಿದ್ಯುತ್‌ ದೀಪಗಳಿಂದ ಕೂಡಿತ್ತು. ಸುತ್ತಮುತ್ತಲಿನ ಕಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ದೇವಾಲಯದಲ್ಲಿ ಮಣ್ಣಿನ ದೀಪಗಳನ್ನು ಬೆಳಗಿಸಿ ತಮ್ಮ ಹರಕೆ ಹಾಗೂ ಕೋರಿಕೆ ಸಲ್ಲಿಸಿದರು.

ಜಾತ್ರಾ ಮಹೋತ್ಸವದಲ್ಲಿ ಮಣ್ಣಿನ ಹಣತೆಗಳ ಮಾರಾಟ ಹೆಚ್ಚಾಗಿತ್ತು.

ಲಕ್ಷ ದೀಪೋತ್ಸವ ಪ್ರಯುಕ್ತ ದೇವಾಲಯದ ಮುಂಭಾಗದಲ್ಲಿ ಲಿಂಗವನ್ನು ಕೃತಕವಾಗಿ ನಿರ್ಮಿಸಿ ಶಿವನ ಮೂರನೆಯ ಕಣ್ಣನ್ನು ನಿರ್ಮಿಸಿದ್ದ ದೃಶ್ಯ ಎಲ್ಲರನ್ನೂ ಆಕರ್ಷಿಸುತ್ತಿತ್ತು.

ದೇವಾಲಯದಲ್ಲಿ ದೀಪ ಬೆಳಗಿಸಿರುವುದು
ದೇವಾಲಯದಲ್ಲಿ ದೀಪ ಬೆಳಗಿಸಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT