ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಳ ಮಣ್ಣಿಗೆ ಕನ್ನ: ಆರೋಪ

ಚೆನ್ನೈ ಕಾರಿಡಾರ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹ
Last Updated 8 ಸೆಪ್ಟೆಂಬರ್ 2022, 6:56 IST
ಅಕ್ಷರ ಗಾತ್ರ

ಬೇತಮಂಗಲ: ಬೆಂಗಳೂರು– ಚೆನ್ನೈ ಕಾರಿಡಾರ್ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು ಸ್ಥಳೀಯ ಗೋಮಾಳ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಮಣ್ಣು ಅಗೆಯುತ್ತಿದ್ದಾರೆ ಎಂದು ರೈತ ಸಂಘ ಆರೋಪಿಸಿದೆ.

‘ಬೆಂಗಳೂರು–ಚೆನ್ನೈ ಕಾರಿಡಾರ್ ಗುತ್ತಿಗೆದಾರರು ನಿಯಮಾನುಸಾರ ಕೆರೆ ಮಣ್ಣು ತೆಗೆಯಲು ಜಿಲ್ಲಾಡಳಿತ ಕೊಟ್ಟಿರುವ ಅವಕಾಶ ದುರುಪಯೋಗಪಡಿಸಿಕೊಂಡು 30 ರಿಂದ 40 ಅಡಿ ಆಳ ಕಂದಕಗಳಷ್ಟು ಮಣ್ಣು ಬಗೆದು ಕೆರೆಯ ಸ್ವರೂಪ ಹಾಳು ಮಾಡುತ್ತಿದ್ದಾರೆ. ಪ್ರಶ್ನಿಸಿದರೆ ದಬ್ಬಾಳಿಕೆ ಮಾಡುತ್ತಾರೆ.ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸಬೇಕೆಂದು’ ಎಂದುಉಪತಹಶೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

‘ಚೆನ್ನೈ ಕಾರಿಡಾರ್ ಗುತ್ತಿಗೆದಾರರು ಕೆರೆ, ಗೋಮಾಳಕ್ಕೆ ಕನ್ನ ಹಾಕಿದ್ದಾರೆ. ಇದರಿಂದ ಮಳೆಗಾಲದಲ್ಲಿ ಹಲವು ಸಮಸ್ಯೆ ಸೃಷ್ಟಿಯಾಗಿದೆ. ಮಣ್ಣಿನ ಸವಕಳಿ ಉಂಟಾಗುತ್ತಿದೆ. ಗೋಮಾಳ ನಾಶವಾಗುತ್ತಿದೆ’ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ,ತಾಲೂಕು ಘಟಕ ಅಧ್ಯಕ್ಷ ರಾಮಸಾಗರ ವೇಣು ಆರೋಪ ಮಾಡಿದರು.

ಕೆರೆ ಅಭಿವೃದ್ಧಿಪಡಿಸುತ್ತೇವೆ ಎನ್ನುವ ಜನಪ್ರತಿನಿಧಿಗಳು ಮತ್ತೊಂದು ಕಡೆ ಅದೇ ಕೆರೆಗಳನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲೂಕು ಅಧ್ಯಕ್ಷ ಸಂದೀಪ್‍ರೆಡ್ಡಿ, ಸಂದೀಪ್‍ಗೌಡ, ಕಿರಣ್, ಇಂದ್ರಾರೆಡ್ಡಿ, ಶ್ರೀನಿವಾಸ್, ಮುನಿಯಪ್ಪ, ರಾಜು, ಗಿರೀಶ್, ವೆಂಕಟರವಣಪ್ಪ, ಪ್ರಭಾಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT