ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಮಾನವ ಸಂದೇಶ ನೀಡಿದ ಕುವೆಂಪು: ಎ. ಅಶ್ವತ್ಥರೆಡ್ಡಿ

Published 29 ಡಿಸೆಂಬರ್ 2023, 13:15 IST
Last Updated 29 ಡಿಸೆಂಬರ್ 2023, 13:15 IST
ಅಕ್ಷರ ಗಾತ್ರ

ಮಾಲೂರು: ಸಾಹಿತ್ಯ ಕ್ಷೇತ್ರದಲ್ಲಿ ಆಧ್ಯಾತ್ಮಿಕ ಕಾಣ್ಕೆಯನ್ನೂ ವೈಚಾರಿಕತೆಯನ್ನೂ ಬಿತ್ತಿದ ಮಹಾಚೇತನ ಕುವೆಂಪು ಅವರಾಗಿದ್ದಾರೆ ಎಂದು ಕುವೆಂಪು ಜಯಂತಿ ಆಚರಣಾ ಸಮಿತಿ ಅದ್ಯಕ್ಷ ಎ. ಅಶ್ವತ್ಥರೆಡ್ಡಿ ಅಭಿಪ್ರಾಯ ಪಟ್ಟರು.

ರಾಷ್ಟ್ರಕವಿ ಕುವೆಂಪು ಜಯಂತಿಯ ಅಂಗವಾಗಿ ಶುಕ್ರವಾರ ಪಟ್ಟಣದ ಅರಳೇರಿ ರಸ್ತೆಯ ಬಳಿ ಇರುವ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಯುಗದ ಕವಿ ಕುವೆಂಪು ಅವರು ಕನ್ನಡ ಸಾರಸ್ವತ ಲೋಕಕ್ಕೆ ವಿಶ್ವಮಾನವ ಸಂದೇಶ ನೀಡಿದ್ದಾರೆ. ಈ ಮೂಲಕ ಜಗತ್ತಿಗೆ ಸಮಸೃಷ್ಟಿ ಪ್ರಜ್ಞೆ ನೀಡುವ ಮೂಲಕ ವಿಶ್ವಪಥಕ್ಕೆ ಮುನ್ನುಡಿ ಬರೆದಿದ್ದಾರೆ.

ಪ್ರತಿಯೊಬ್ಬರೂ ತಮ್ಮ ಬದುಕು, ನಡೆ- ನುಡಿಗಳಲ್ಲಿ ಕುವೆಂಪು ಅವರ ಸಾಹಿತ್ಯದ ಪ್ರೇರಣೆಯ ಆದರ್ಶಗಳನ್ನು ಅಳವಡಿಸಿಕೊಂಡು ಸರಳತೆ, ಸಮಾನತೆ, ನೆಮ್ಮದಿಯ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಸಾಪ ತಾಲ್ಲೂಕು ಅಧ್ಯಕ್ಷ ಎಂ.ವಿ. ಹನುಮಂತಪ್ಪ, ನಿಕಟಪೂರ್ವ ಅಧ್ಯಕ್ಷ ಡಿ.ಎಂ.ವೆಂಕಟೇಶ್, ಪುರಸಭಾ ಸದಸ್ಯರಾದ ಕೋಮಲ ನಾರಾಯಣ್, ಬುಲೆಟ್ ವೆಂಕಟೇಶ್, ಕವಿಗಳಾದ ಮಾಸ್ತಿ ಕೃಷ್ಣಪ್ಪ, ಗುಲ್ಜಾರ್, ರಾಧಾ ಬಾಲಕೃಷ್ಣ , ಮಾಲತಿ ಮಂಜುನಾಥ್, ಮಂಜುಳ, ಟಿ.ಎಂ.ವೆಂಕಟೇಶ್, ಮಾ.ಚಿ.ನಾಗರಜ್, ಮೆಹಬೂಬ್ ಸಾಬ್, ಕಲ್ಲು ಸೀನಪ್ಪ, ಸಿ.ಆರ್.ರೇವಣ್ಣ, ಸಿ.ಎಂ.ಮುನಿರಾಜು, ಕೆ.ಎಂ.ಮುನಿಕೃಷ್ಣಪ್ಪ, ಕನ್ನಡ ಪರ ಸಂಘಟನೆಗಳ ಎಸ್‌‌.ಎಂ.ರಾಜು, ಕೋಡೂರು ಗೋಪಾಲ್, ಚಾಕನಹಳ್ಳಿ ನಾಗರಾಜ್, ಎಚ್.ಸಿ.ಚನ್ನಕೃಷ್ಣ, ಜಗದೀಶ್, ಶಿವಾರೆಡ್ಡಿ, ಟಿ.ಎಂ.ಗೋಪಾಲ್, ಆಟೊ ಶ್ರೀನಿವಾಸ್ ಇನ್ನಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT