ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಲೋಕಸಭಾ ಕ್ಷೇತ್ರ | ಅನಿರೀಕ್ಷಿತ ಸ್ಪರ್ಧೆ: ಹೊಸ ಮುಖಗಳ ಪೈಪೋಟಿ

Published 2 ಏಪ್ರಿಲ್ 2024, 6:14 IST
Last Updated 2 ಏಪ್ರಿಲ್ 2024, 6:14 IST
ಅಕ್ಷರ ಗಾತ್ರ

ಕೋಲಾರ ಮೀಸಲು ಲೋಕಸಭೆ ಕ್ಷೇತ್ರಕ್ಕೆ ಈ ಬಾರಿ ಇಬ್ಬರೂ ಹೊಸ ಮುಖಗಳೇ. ಮೊದಲ ಬಾರಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ನ ಕೆ.ವಿ.ಗೌತಮ್‌ ಹಾಗೂ ಜೆಡಿಎಸ್‌ನ ಎಂ.ಮಲ್ಲೇಶ್‌ ಬಾಬು ನಡುವೆ ನೇರ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ.

ಎರಡೂ ಪಕ್ಷಗಳು ತಡವಾಗಿ ಟಿಕೆಟ್‌ ಘೋಷಿಸಿದ್ದು, ಕಾಂಗ್ರೆಸ್‌ನಲ್ಲಂತೂ ಅಭ್ಯರ್ಥಿ ವಿಚಾರವಾಗಿ ರಾದ್ಧಾಂತವೇ ನಡೆದಿದೆ.

ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸತತ ಎಂಟು ಬಾರಿ ಕೆ.ಎಚ್‌.ಮುನಿಯಪ್ಪ ಸ್ಪರ್ಧಿಸಿ ಏಳು ಬಾರಿ ಗೆದ್ದಿದ್ದಾರೆ. ಅವರು 2019ರ ಚುನಾವಣೆಯಲ್ಲಿ ಬಿಜೆಪಿಯ ಎಸ್‌.ಮುನಿಸ್ವಾಮಿ ವಿರುದ್ಧ ಪರಾಭವಗೊಂಡಿದ್ದರು. ಆ ಮೂಲಕ ಬಿಜೆಪಿ ಈ ಕ್ಷೇತ್ರದಲ್ಲಿ ಮೊದಲ ಬಾರಿ ಖಾತೆ ತೆರೆದಿತ್ತು. ಈ ಬಾರಿ ಮೈತ್ರಿಧರ್ಮ ಪಾಲನೆಗಾಗಿ ಬಿಜೆಪಿ ಈ ಕ್ಷೇತ್ರ ತ್ಯಾಗ ಮಾಡಿದ್ದು ಜೆಡಿಎಸ್‌ ಪಕ್ಷ ತನ್ನ ಅಭ್ಯರ್ಥಿ ಕಣಕ್ಕಿಳಿಸಿದೆ.

ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಗೌತಮ್‌ ಹೊರಗಿನವರು ಎಂಬ ಅಸ್ತ್ರ ಪ್ರಯೋಗಿಸಲು ಜೆಡಿಎಸ್‌ ಈಗಲೇ ಸಜ್ಜಾದಂತಿದೆ. ‘ಸ್ಥಳೀಯರು ವರ್ಸಸ್‌ ಹೊರಗಿನವರು’ ಎಂಬ ಅಭಿಯಾನವನ್ನೇ ಆರಂಭಿಸಿದೆ. ಭೋವಿ ಸಮುದಾಯದ ಮಲ್ಲೇಶ್‌ ಬಾಬು ಬಂಗಾರಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ.

ಬಣ ಜಗಳ ಇರುವುದರಿಂದ ಕಾಂಗ್ರೆಸ್‌ ಅಭ್ಯರ್ಥಿ ಮುಂದೆ ದೊಡ್ಡ ಸವಾಲು ಇದೆ. ಆದರೆ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೇಲೆ ನಂಬಿಕೆ ಇಟ್ಟುಕೊಂಡಿದೆ. ಇನ್ನು ಜೆಡಿಎಸ್‌ ಕಳೆದ ಬಾರಿ ಗೆದ್ದಿದ್ದ ಬಿಜೆಪಿ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ಮೋದಿ ನಾಮ ಜಪಿಸುತ್ತಿದೆ. ಆದರೆ, ಮೈತ್ರಿ ಪಕ್ಷಗಳ ಕಾರ್ಯಕರ್ತರ ನಡುವೆ ಹೊಂದಾಣಿಕೆ ಆಗಲಿದೆಯೇ ಎಂಬ ಪ್ರಶ್ನೆಯೂ ಕ್ಷೇತ್ರದಲ್ಲಿದೆ.

ಅಭ್ಯರ್ಥಿಗಳು

ಕೆ.ವಿ.ಗೌತಮ್‌, ಕಾಂಗ್ರೆಸ್‌

ಎಂ.ಮಲ್ಲೇಶ್‌ ಬಾಬು, ಜೆಡಿಎಸ್‌

ವಿಧಾನಸಭೆ ಕ್ಷೇತ್ರಗಳ ಪಕ್ಷವಾರು ಪ್ರಾತಿನಿಧ್ಯ

ಕಾಂಗ್ರೆಸ್‌ 5

ಜೆಡಿಎಸ್‌ 3

ಬಿಜೆಪಿ: 0

ಮತದಾರರ ಸಂಖ್ಯೆ

ಪುರುಷರು; 8,45,636

ಮಹಿಳೆಯರು; 8,62,716

ಲಿಂಗತ್ವ ಅಲ್ಪಸಂಖ್ಯಾತರು; 213

ಒಟ್ಟು; 17,08,565

2019; ಹೆಸರು; ಪಕ್ಷ; ಪಡೆದ ಮತಗಳು

ಗೆದ್ದವರು; ಎಸ್‌.ಮುನಿಸ್ವಾಮಿ; ಬಿಜೆಪಿ; 7,09,165

ಸಮೀಪದ ಪ್ರತಿಸ್ಪರ್ಧಿ; ಕೆ.ಎಚ್‌.ಮುನಿಯಪ್ಪ; ಕಾಂಗ್ರೆಸ್‌; 4,99,144

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT