ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2.5 ಕೋಟಿ ವೆಚ್ಚದ ರಥ ಬೀದಿ ಸಿಸಿ ರಸ್ತೆಗೆ ಭೂಮಿ ಪೂಜೆ

ಚಿಕ್ಕತಿರುಪತಿಯ ವೆಂಕಟರಮಣ ದೇವಾಲಯ ಅಭಿವೃದ್ಧಿಗೆ ಒತ್ತು
Published 9 ಮಾರ್ಚ್ 2024, 14:22 IST
Last Updated 9 ಮಾರ್ಚ್ 2024, 14:22 IST
ಅಕ್ಷರ ಗಾತ್ರ

ಮಾಲೂರು: ಚಿಕ್ಕ ತಿರುಪತಿಯ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯ ಆವರಣದಲ್ಲಿ ಹೋಬಳಿ ಮಟ್ಟದ ಗ್ಯಾರೆಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಹಾಗೂ ₹2.5 ಕೋಟಿ ವೆಚ್ಚದ ರಥ ಬೀದಿಯ ಸಿಸಿ ರಸ್ತೆ ಭೂಮಿ ಪೂಜೆ ನೆರೆವೇರಿತು.

ಈ ವೇಳೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಚಿಕ್ಕತಿರುಪತಿಯ ವೆಂಕಟರಮಣ ದೇವಾಲಯವನ್ನು ದೊಡ್ಡ ತಿರುಪತಿ ರೀತಿಯಲ್ಲಿ ಅಭಿವೃದ್ಧಿಪಡಿಸಿ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಮಾಡಲಾಗುವುದು ಎಂದರು.

ಚಿಕ್ಕ ತಿರುಪತಿಯಲ್ಲಿ ನಡೆಯುವ ಜಾತ್ರೆಗೆ ರಾಜ್ಯ ಮತ್ತು ಅಂತರ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಹಾಗಾಗಿ ಈ ಕ್ಷೇತ್ರಕ್ಕೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ದೇವಾಲಯದ ಮುಂದೆ ನೂತನವಾಗಿ ನಿರ್ಮಾಣವಾಗಿರುವ 108 ಅಡಿಯ ರಾಜಗೋಪುರವನ್ನು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು. ದೇವಾಲಯದ ಹಿಂಭಾಗ ಶಿಥಿಲಗೊಂಡಿದ್ದು, 2016ರ ಕ್ರೀಯಾ ಯೋಜನೆ ಪ್ರಸ್ತಾವನೆಯಂತೆ ದೇವಸ್ಥಾನ ಮರುಸ್ಥಾಪನೆ ಮಾಡಲು ಯೋಜನೆ ತಯಾರಿಸಲು ಸೂಚಿಸಲಾಗಿದೆ. ಯೋಜನೆ ಸಿದ್ಧಪಡಿಸಿದರೆ ನೀಡಿದರೆ ದೇವಾಲಯವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾಲೂರು ಬಸ್ ಘಟಕಕ್ಕೆ ನಾಲ್ಕು ಅಶ್ವಮೇದ ಬಸ್‌ಗಳನ್ನು ನೀಡಲಾಯಿತು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಬಸ್‌ಗಳನ್ನು ನೀಡಲಾಗುವುದು ಎಂದು ತಿಳಿಸಿದರು.

ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ರಥ ಬೀದಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿರುವುದು ಸಂತೋಷದ ವಿಷಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ದೇವಾಲಯದ ಮುಂದೆ ನಿರ್ಮಾಣವಾಗಿರುವ ಗೋಪುರ ಉದ್ಘಾಟನೆ ದಿನದಂದು ದೇವಾಲಯ ಮರುಸ್ಥಾಪನೆಗೆ ಚಾಲನೆ ನೀಡಲಾಗುವುದು ಎಂದರು.

ರಾಜ್ಯ ಸರ್ಕಾರವು ರಸ್ತೆ ಅಭಿವೃದ್ಧಿಗೆ ₹1,872 ಕೋಟಿ ಬಿಡುಗಡೆಗೊಳಿಸಿದ್ದು, ಮಾಲೂರು ಪಟ್ಟಣದ ಎಪಿಎಂಸಿ ಮಾರುಕಟ್ಟೆಯಿಂದ ರೈಲ್ವೆ ನಿಲ್ದಾಣದವರೆಗೆ 2 ಕಿ.ಮೀ ಮೇಲ್ಸೇತುವೆ ಹಾದು ಹೋಗುತ್ತದೆ. ಸರ್ಕಾರದ ಸಹಕಾರ ಪಡೆದು ತಾಲ್ಲೂಕನ್ನು ಸಮಗ್ರ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ರಾಮ್ ಪ್ರಸಾದ್, ಪದ್ಮಾ ವೆಂಕಟೇಶ್, ಕೆ.ರಮೇಶ್, ವೀಣಾ, ಸೆಲ್ವಮಣಿ, ವಸಂತಮ್ಮ, ರಾಜೇಶ್ವರಿ, ಮಂಜುನಾಥ್, ಮಂಜುಳಮ್ಮ, ವಿನಯ್ ಗೌಡ, ಹರಿದ್ರ ಗೋಪಾಲ್, ರಾಘವೇಂದ್ರ ರಾವ್, ಶಂಕರ್, ಅಮರೇಶ್ ಬಾಬು, ವಿಜಯನರಸಿಂಹ, ಅಶ್ವಥ್ ರೆಡ್ಡಿ, ಎ.ಕೆ.ವೆಂಕಟೇಶ್, ಸಂಪಂಗೆರೆ ರಾಘವೇಂದ್ರ, ಸುಬ್ರಮಣಿ, ಜಿ.ವಿ ಮಂಜುನಾಥ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT