ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಣ್ಯ‌ ನುಂಗಿದ‌ ಮಗು; ಸರಳವಾಗಿ ತೆಗೆದ ವೈದ್ಯರು

Published 21 ಏಪ್ರಿಲ್ 2024, 14:41 IST
Last Updated 21 ಏಪ್ರಿಲ್ 2024, 14:41 IST
ಅಕ್ಷರ ಗಾತ್ರ

ಕನಕಗಿರಿ: ಆಟವಾಡುತ್ತಿರುವ ಸಮಯದಲ್ಲಿ ಮಗುವೊಂದು ನಾಣ್ಯ ನುಂಗಿದ ಘಟನೆ ಗುರುವಾರ ನಡೆದಿದೆ.
ಸಮೀಪದ ಬಂಕಾಪುರ ಗ್ರಾಮದ 7 ವರ್ಷದ ಶ್ವೇತಾ ಎಂಬ ಬಾಲಕಿ ನಾಣ್ಯ ನುಂಗಿದವಳು.

ನಾಣ್ಯ ಹೊರ ತರಲು ಪಾಲಕರು 1 ದಿನ ಪ್ರಯತ್ನ ಪಟ್ಟಿದ್ದಾರೆ ಅದು ಬಾರದ ಪರಿಣಾಮ ಇಲ್ಲಿನ ಖಾಸಗಿ ವೈದ್ಯ ಡಾ. ಡಿ.ಎಂ.‌ಅರವಟಗಿಮಠ ಅವರಲ್ಲಿ ಕರೆ ತಂದಾಗ ಸೂಕ್ತ ತಪಾಸಣೆ ನಡೆಸಿದ ಅವರು ಎಕ್ಸ್‌ರೇ ಮಾಡಿಸಿದಾಗ ನಾಣ್ಯ ಗಂಟಲಿನಲ್ಲಿ ಸಿಕ್ಕಿ ಹಾಕಿ ಕೊಂಡಿರುವುದು ಕಂಡು ಬಂದಿದೆ.


ಹೆಚ್ಚಿನ ಚಿಕಿತ್ಸೆಗೆ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದು ಅಲ್ಲಿನ ತಜ್ಞ ವೈದ್ಯರು ಯಶಸ್ವಿ ಆಗಿ 1 ರೂಪಾಯಿಯ ನಾಣ್ಯವನ್ನು ಹೊರ ತೆಗೆದು ಪ್ರಾಣ ಉಳಿಸಿ ಪಾಲಕರಿಗೆ ತಿಳುವಳಿಕೆ ಮೂಡಿಸಿದ್ದಾರೆ ಎಂದು ಲೈಫ್ ಕ್ಯೂರ್ ಎಕ್ಸ್‌ರೇ ಕೇಂದ್ರದ ಮಾಲೀಕ ವಿನೋದ ಕಂದಗಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT