ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಾಕ್‌ಡೌನ್‌ನಿಂದ ಬಸವಳಿದ ಎಪಿಎಂಸಿ

ಭತ್ತಕ್ಕೆ ಬೆಲೆ ಇದ್ದರೂ, ಕೇಳುವವರಿಲ್ಲ, ನಿದ್ದೆಗೆಡಿಸಿದ ಮಳೆಯ ಕಣ್ಣಾ ಮುಚ್ಚಾಲೆ: ಸಂಕಷ್ಟದಲ್ಲಿ ದಿನ ದೂಡುತ್ತಿರುವ ಅನ್ನದಾತ
Last Updated 10 ಮೇ 2021, 5:29 IST
ಅಕ್ಷರ ಗಾತ್ರ

ಕೊಪ್ಪಳ: ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಮೊದಲಿನ ವೈಭವ ಕಳೆದುಕೊಂಡ ಕೃಷಿ ಉತ್ಪನ್ನ ಮಾರುಕಟ್ಟೆಗಳು ಈಗ ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿವೆ. ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ಇದು ವ್ಯಾಪಾರಸ್ಥರು ಮತ್ತು ರೈತರ ಆತಂಕಕ್ಕೆ ಕಾರಣವಾಗಿದೆ.

ನಸುಕಿನ ಜಾವ 4ರ ಸುಮಾರಿಗೆ ಮಾರುಕಟ್ಟೆ ಗದ್ದಲ, ಗಲಿಬಿಲಿ ಶುರುವಾಗುತಿತ್ತು. ಅನೇಕರ ಜೀವನಕ್ಕೆ ಆಧಾರವಾಗಿ ಸೊಪ್ಪು, ತರಕಾರಿ, ಕಾಳು, ಕಡಿ, ಕಾಯಿ, ಹಣ್ಣು ಸೇರಿದಂತೆ ತರೇವಾರಿ ವ್ಯಾಪಾರದಿಂದ ಜೀವಕಳೆ ಇರುತ್ತಿತ್ತು.

ರೈತರು ತಮ್ಮ ಹೊಲದಲ್ಲಿ ಬೆಳೆಯುವ ಬೆಳೆಯನ್ನು ಇಲ್ಲಿ ಕಡಿಮೆ ಪ್ರಮಾಣದ ಸೆಸ್‌ ಕಟ್ಟಿ ವ್ಯಾಪಾರ ಮುಗಿಸಿ ಕೈತೊಳೆದುಕೊಂಡು ಹೋಗುತ್ತಿದ್ದರು. ಈಗ ಎಲ್ಲಿ ಬೇಕು ಅಲ್ಲಿ ಮಾರಾಟ ಮಾಡುವುದರಿಂದ ವ್ಯವಸ್ಥಿತ ಮಾರುಕಟ್ಟೆ ಇಲ್ಲದೆ, ವಸ್ತುಗಳ ಮಾಹಿತಿ ದೊರೆಯದೇ ಅಡ್ಡಾದಿಡ್ಡಿ ಬೆಲೆಗೆ ಮಾರಿ, ಕೆಲವೊಮ್ಮೆ ಬೆಲೆಯೂ ಬಾರದೇ ರಸ್ತೆಗೆ ಸುರಿದು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಲಾಕ್‌ಡೌನ್‌: ಕೊರೊನಾ ಸೋಂಕಿನ ಕಾರಣ ಸರ್ಕಾರ ವಿವಿಧ ನಿರ್ಬಂಧ ವಿಧಿಸಿ ಲಾಕ್‌ಡೌನ್‌ ಘೋಷಿಸಿದೆ. ಕೊರೊನಾ ಮೊದಲ ಅಲೆಗೆ ಏಳು ತಿಂಗಳು ಲಾಕ್‌ಡೌನ್‌ ಆಗಿ ಪರದಾಡಿದ್ದ ಎಪಿಎಂಸಿಗಳು ನಿಧಾನವಾಗಿ ವ್ಯಾಪಾರ-ವಹಿವಾಟು ಆರಂಭಿಸಿದ್ದವು. ಎರಡನೇ ಅಲೆ ಧುತ್ತೆಂದು ಆವರಿಸಿಕೊಂಡಿದ್ದರಿಂದ ಮತ್ತೆ ವ್ಯಾಪಾರಕ್ಕೆ ಕುತ್ತು ಬಂದಿದೆ. ಎಪಿಎಂಸಿಗೂ ಆದಾಯವಿಲ್ಲದೆ ಪರದಾಡುವಂತೆ ಆಗಿದೆ.

ಎರಡನೇ ಲಾಕ್‌ಡೌನ್‌ ಅವಧಿಯಲ್ಲಿ ಬೆಳಿಗ್ಗೆ 6ರಿಂದ 10ಕ್ಕೆ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜನಜಂಗುಳಿ ಇಲ್ಲಿ ಸೇರುವುದು ಮಾಮೂಲಿ. ಬಹುತೇಕ ಗ್ರಾಮೀಣ ಮತ್ತು ಬಡವರು, ಮಧ್ಯಮ ವರ್ಗದ ವ್ಯಾಪಾರಿಗಳೇ ಇಲ್ಲಿಗೆ ಬರುವುದರಿಂದ ಪರಸ್ಪರ ಅಂತರ, ಮಾಸ್ಕ್, ಸ್ಯಾನಿಟೈಷರ್‌ ಬಳಕೆ ಸೇರಿದಂತೆ ವಿವಿಧ ಮಾರ್ಗಸೂಚಿ ಅನುಸರಿಸುವುದು ಕಷ್ಟಕರವಾಗಿದೆ.

ಸೌಲಭ್ಯಗಳ ಕೊರತೆ: ಎಪಿಎಂಸಿಗಳಲ್ಲಿ ಮುಂಚಿನಿಂದಲೂ ಮೂಲಸೌಕರ್ಯ ಕೊರತೆ ಇದೆ. ರಸ್ತೆ, ಶುದ್ಧ ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಹಲವು ಸೌಲಭ್ಯಗಳನ್ನು ಈಚೆಗೆ ತಕ್ಕಮಟ್ಟಿಗೆ ಒದಗಿಸಲಾಗಿತ್ತು. ರೈತ ಭವನಗಳನ್ನು ನಿರ್ಮಿಸಿದ್ದರೂ ಅವುಗಳ ಉಪಯೋಗ ಮಾತ್ರ ಕಡಿಮೆ. ಕೆಲ ಎಪಿಎಂಸಿಗಳಲ್ಲಿ ತಂಗುದಾಣಗಳು ಇವೆ. ಅಲ್ಲಿ ಕೂಡಾ ಸೌಕರ್ಯವಿಲ್ಲದೆ ಬಿಕೋ ಎನ್ನುವಂತೆ ಆಗಿದೆ.

ಜಿಲ್ಲೆಯಲ್ಲಿ ಕೊಪ್ಪಳ, ಗಂಗಾವತಿ, ಕಾರಟಗಿ, ಕುಕನೂರು, ಕುಷ್ಟಗಿಯಲ್ಲಿ ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳು ಇವೆ. ಕೆಲವು ಕಡೆ ಉಪ ಮಾರುಕಟ್ಟೆಗಳು ಇವೆ. ಬೂದಗುಂಪಾ, ಕೂಕನಪಲ್ಲಿಯಲ್ಲಿ ಕುರಿ-ಮೇಕೆ ಸಂತೆ, ಕುಷ್ಟಗಿ ಜಾನುವಾರುಗಳ ಸಂತೆ ಪ್ರಸಿದ್ಧವಾಗಿವೆ. ಕುಕನೂರು, ಕುಷ್ಟಗಿ ಎಪಿಎಂಸಿಗಳು ಕಾಳುಕಡಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿವೆ. ಗಂಗಾವತಿ, ಕಾರಟಗಿ ಭಾಗದಲ್ಲಿ ಅಕ್ಕಿ ಮಾರುಕಟ್ಟೆ ದೊಡ್ಡ ಪ್ರಮಾಣದಲ್ಲಿ ಇದ್ದು ಸಾವಿರಾರು ಕೋಟಿ ವ್ಯಾಪಾರ ವಹಿವಾಟು ನಡೆಯುತ್ತದೆ.

ವಾರ್ಷಿಕ ₹ 1 ಸಾವಿರ ಕೋಟಿ ವ್ಯಾಪಾರ ನಡೆದು ಎಪಿಎಂಸಿಗೆ ₹ 100 ಕೋಟಿ ಲಾಭ ಬರುತಿತ್ತು. ಈಗ ಎಪಿಎಂಸಿ ಸಮಿತಿಗಳ ಸಭೆ ನಡೆಸಿ ಅವರಿಗೆ ಚಹಾ ಕುಡಿಸಿ, ಭತ್ಯೆ ನೀಡಲು ಕೊರತೆ ಆಗುತ್ತಿದೆ ಎಂದು ಆಡಳಿತ ಮಂಡಳಿ ಸಿಬ್ಬಂದಿಯೇ ವಿಷಾದದಿಂದ ಹೇಳುತ್ತಾರೆ. ಎಪಿಎಂಸಿ ಸದಸ್ಯರು ರೈತ ಪ್ರತಿನಿಧಿಗಳಂತೆ ಕೆಲಸ ಮಾಡುತ್ತಾರೆ. ರೈತ ಹೋರಾಟಗಾರರಿಗೂ ಇದು ಪ್ರಮುಖ ತಾಣವಾಗಿತ್ತು. ಆದರೆ ಎಪಿಎಂಸಿ ತನ್ನ ಮೊದಲಿನ ವೈಭವವಿಲ್ಲದೆ ಸೊರಗುತ್ತಿರುವುದು ಒಂದೆಡೆಯಾದರೆ, ಲಾಕ್‌ಡೌನ್‌ ಇನ್ನೊಂದು ಸಮಸ್ಯೆಯನ್ನು ತಂದೊಡ್ಡಿರುವುದು ಸುಳ್ಳಲ್ಲ.

ಶೇಂಗಾ ಖರೀದಿ ಮಂದಗತಿ: ದರದಲ್ಲೂ ಇಳಿಕೆ

ಕುಷ್ಟಗಿ: ಬೇಸಿಗೆ ಅವಧಿ ಶೇಂಗಾ ಹೊರತುಪಡಿಸಿ ಸದ್ಯ ಈ ಭಾಗದಲ್ಲಿ ಯಾವುದೇ ಕೃಷಿ ಉತ್ಪನ್ನಗಳು ಇಲ್ಲದ ಕಾರಣ ಮಾರಾಟ ವ್ಯವಸ್ಥೆಗೆ ಸಂಬಂಧಿಸಿದಂತೆ ಜನತಾ ಕರ್ಫ್ಯೂ ರೈತರಿಗೆ ಹೆಚ್ಚಿನ ತೊಂದರೆ ಉಂಟು ಮಾಡಿಲ್ಲ. ಆದರೆ ಹೆಚ್ಚಿನ ಖರೀದಿದಾರರು ಬಾರದ ಕಾರಣ ಶೇಂಗಾ ದರದಲ್ಲಿ ಇಳಿಕೆಯಾಗಿ ರೈತರು ನಷ್ಟಕ್ಕೆ ಗುರಿಯಾಗಿದ್ದಾರೆ.

ಮಾರ್ಚ್ ಏಪ್ರಿಲ್ ಅವಧಿಯಲ್ಲಿ ಆವಕವಾಗುತ್ತಿದ್ದ ಶೇ75ರಷ್ಟು ಶೇಂಗಾವನ್ನು ರೈತರು ಮಾರಾಟಮಾಡಿದ್ದು ಶೇ25ರಷ್ಟು ಮಾತ್ರ ಉಳಿದಿದೆ. ವರ್ತಕರು ಶೇಂಗಾ ಕಾಳಿನ ಉತ್ಪನ್ನ ಮಾರಾಟವನ್ನು ಮಹಾರಾಷ್ಟ್ರ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಗಿಸುವುದು ವಾಡಿಕೆ.

ಆದರೆ ಕೋವಿಡ್‌ ಸಮಸ್ಯೆ ಹೆಚ್ಚಿದ್ದರಿಂದ ಆ ರಾಜ್ಯವನ್ನು ಮೊದಲೇ ಲಾಕ್‌ಡೌನ್‌ ಮಾಡಿದ್ದರಿಂದ ವರ್ತಕರು ಇಲ್ಲಿ ಶೇಂಗಾ ಖರೀದಿ ಪ್ರಕ್ರಿಯೆ ಸದ್ಯ ಮಂದಗತಿಯಲ್ಲಿ ಸಾಗಿದೆ. ಖರೀದಿಸಿದ ಶೇಂಗಾವನ್ನು ಮಹಾರಾಷ್ಟ್ರ ಹೊರತುಪಡಿಸಿ ತಮಿಳುನಾಡಿಗೆ ಸಾಗಣೆ ಮಾಡಲಾಗುತ್ತಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

‘ಇನ್ನು ಅಲ್ಪಸ್ವಲ್ಪ ಉಳಿದಿರುವ ಸಜ್ಜೆ, ಮೆಕ್ಕೆಜೋಳ, ಹುರುಳಿ ಕನಿಷ್ಟ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಹೆಚ್ಚಿನ ಕೃಷಿ ಉತ್ಪನ್ನಗಳು ಇಲ್ಲದ ಕಾರಣ ಜನತಾ ಲಾಕ್‌ಡೌನ್ ಮಾರುಕಟ್ಟೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿಲ್ಲ’ ಎಂದು ಎಪಿಎಂಸಿ ಗಂಜ್ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ ವಿವರಿಸಿದರು.

‘ರೈತರ ಬಹುತೇಕ ಕೃಷಿ ಉತ್ಪನ್ನಗಳು ಈಗಾಗಲೇ ಮಾರಾಟವಾಗಿವೆ, ಸ್ವಲ್ಪ ಪ್ರಮಾಣದ ಶೇಂಗಾ ಆವಕವಾಗುತ್ತಿದ್ದು ದಲ್ಲಾಳಿ ಅಂಗಡಿಗಳ ಮಟ್ಟದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಜನ ಗುಂಪುಗೂಡದಂತೆ ಕೋವಿಡ್‌ ನಿಯಮಗಳನ್ನು ಪಾಲಿಸಲಾಗುತ್ತಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟರ ತಿಳಿಸಿದರು.

ಎಪಿಎಂಸಿ ಯಾರ್ಡ್ ಸ್ಥಿತಿ ಗಂಭೀರ

ಕುಕನೂರು: ಪಟ್ಟಣದ ಎಪಿಎಂಸಿ ವ್ಯಾಪಾರ ಸಂಪೂರ್ಣ ಸ್ತಬ್ಧವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಮುಚ್ಚುವ ಪರಿಸ್ಥಿತಿ ಬರಲಿದೆ ಎಂದು ರೈತ ರಾಮಣ್ಣ ವಿಷಾದದಿಂದ ಹೇಳುತ್ತಾರೆ.

ಇಲ್ಲಿನ ಎಪಿಎಂಸಿಗೆ ಮಾಸಿಕ₹ 30 ರಿಂದ 35 ಲಕ್ಷಲಾಭ ಬರುತ್ತಿತ್ತು.ಈಗ ತಿಂಗಳಿಗೆ ₹ 40 ಸಾವಿರ ಬರುತ್ತಿದೆ.ಕೇಂದ್ರ ಸರ್ಕಾರದ ಹೊಸ ಎಪಿಎಂಸಿ ಕಾಯ್ದೆಮತ್ತು ಲಾಕ್‌ಡೌನ್‌ನಿಂದ ಜನರು ಎಪಿಎಂಸಿಯತ್ತ ಮುಖ ಮಾಡುವುದೇ ಇಲ್ಲ. ಇದರಿಂದವ್ಯಾಪಾರ ವಹಿವಾಟು ಸಂಪೂರ್ಣ ಕುಸಿದಿದೆ.

‘ತೆರಿಗೆ ಕಟ್ಟದ ವ್ಯಾಪಾರಸ್ಥರಿಗೆ ನೋಟಿಸ್‌ ನೀಡಿದರೆ ಯಾವುದೇವ್ಯಾಪಾರವಾಗಿಲ್ಲ ಎಂದು ಹೇಳುತ್ತಾರೆ.ಈಗ ಕೊರೊನಾದಮತ್ತಷ್ಟು ಹೊಡೆತದಿಂದ ರೈತರು ಮಾರುಕಟ್ಟೆಗೆ ಬರುತ್ತಿಲ್ಲ’ ಎಂದು ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಶಾಮ್ ಹೇಳಿದರು.

‘ಎಪಿಎಂಸಿಗೆ ಉತ್ಪನ್ನ ತೆಗೆದುಕೊಂಡು ಹೋದರೆ ಕೊಳ್ಳುವವರೇ ಇಲ್ಲ. ಆದ್ದರಿಂದ ನಾವು ಉತ್ಪನ್ನವನ್ನು ಹೊರಗಡೆ ವ್ಯಾಪಾರಿಗಳಿಗೆ ಮಾರುವುದು ಅನಿವಾರ್ಯವಾಗಿದೆ’ ಎಂದು ರೈತ ಲಕ್ಷ್ಮಣ್ ಹೇಳಿದರು.

ಮಾರಾಟ, ಸಾಗಣೆಗೆ ತೊಂದರೆ

ಕಾರಟಗಿ: ಭತ್ತದ ಕಣಜವೆಂದೇ ಹೆಸರಾದ ಅವಿಭಜಿತ ಗಂಗಾವತಿ-ಕಾರಟಗಿ ಎಪಿಎಂಸಿಗಳು ಭತ್ತದ ಮಾರುಕಟ್ಟೆಗೆ ರಾಜ್ಯದಲ್ಲಿಯೇ ಹೆಸರುವಾಸಿ. ಲಾಕ್‌ಡೌನ್‌ ಇದ್ದರೂ ಎಪಿಎಂಸಿ ಎಂದಿನಂತೆಯೇ ಕಾರ್ಯನಿರ್ವಹಿಸುತ್ತಿದೆ. ಖರೀದಿ, ಸಾಗಣೆಗೆ ‘ಲಾಕ್‌’ ಬಿದ್ದಿದೆ. ರೈತರ ಮಾರಾಟಕ್ಕೆ ತೊಂದರೆ ಇಲ್ಲ. ಆದರೆ ಹೊಸ ಭತ್ತ ಖರೀದಿಗೆವ್ಯಾಪಾರಿಗಳು ಮುಂದಾಗುತ್ತಿಲ್ಲ.

ಹೊರಗಿನಿಂದ ಬರುವ ಭತ್ತವು ವ್ಯಾಪಾರಿಗಳ ಗೋದಾಮಿಗೆ ಕಡಿಮೆ ದರದಲ್ಲಿ ನೀಡಿ ತೆರಳುತ್ತಿದ್ದಾರೆ.ಇನ್ನೊಂದೆಡೆ ನಿರಂತರವಾಗಿ ಸಾಗಣೆಯಾಗುತ್ತಿದ್ದ ನಗರಗಳಲ್ಲಿ ಹಳೆಯ ಭತ್ತಕ್ಕೆ ಮಾತ್ರ ಬೇಡಿಕೆ ಇದೆ. ಹೀಗಾಗಿ ವ್ಯಾಪಾರಿಗಳು ಗುಣಮಟ್ಟ ಇರದಿದ್ದರೂ, ಕಡಿಮೆ ದರದಲ್ಲಿ ಸಿಗುವ ಹೊರಗಿನ ಭತ್ತದ ಖರೀದಿಗೆ ಮುಂದಾಗಿದ್ದಾರೆ.

‘ವ್ಯಾಪಾರಿಗಳು ಕಡ್ಡಾಯವಾಗಿ ಕೊರೊನಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಕಚೇರಿ ಸಹಿತ ಆವರಣವನ್ನು ಸ್ಯಾನಿಟೈಜ್‌ ಮಾಡಲಾಗಿದೆ. ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸುವ ಯತ್ನ ಮಾಡಿದ್ದು, ಎಲ್ಲರೂ ನಿಯಮಗಳನ್ನು ಪಾಲಿಸುತ್ತಿದ್ದಾರೆ’ ಎನ್ನುತ್ತಾರೆ ಇಲ್ಲಿನ ವಿಶೇಷ ಎಪಿಎಂಸಿ ಕಾರ್ಯದರ್ಶಿ ಕುಮಾರಸ್ವಾಮಿ.

ಶೇಂಗಾ ಖರೀದಿ ಮಂದಗತಿ, ದರದಲ್ಲೂ ಇಳಿಕೆ

ಕುಷ್ಟಗಿ: ಬೇಸಿಗೆ ಅವಧಿ ಶೇಂಗಾ ಹೊರತುಪಡಿಸಿ ಸದ್ಯ ಈ ಭಾಗದಲ್ಲಿ ಯಾವುದೇ ಕೃಷಿ ಉತ್ಪನ್ನಗಳು ಇಲ್ಲದ ಕಾರಣ ಮಾರಾಟ ವ್ಯವಸ್ಥೆಗೆ ಸಂಬಂಧಿಸಿದಂತೆ ಜನತಾ ಕರ್ಫ್ಯೂ ರೈತರಿಗೆ ಹೆಚ್ಚಿನ ತೊಂದರೆ ಉಂಟು ಮಾಡಿಲ್ಲ. ಆದರೆ ಹೆಚ್ಚಿನ ಖರೀದಿದಾರರು ಬಾರದ ಕಾರಣ ಶೇಂಗಾ ದರದಲ್ಲಿ ಇಳಿಕೆಯಾಗಿ ರೈತರು ನಷ್ಟಕ್ಕೆ ಗುರಿಯಾಗಿದ್ದಾರೆ.

ಮಾರ್ಚ್ ಏಪ್ರಿಲ್ ಅವಧಿಯಲ್ಲಿ ಆವಕವಾಗುತ್ತಿದ್ದ ಶೇ75ರಷ್ಟು ಶೇಂಗಾವನ್ನು ರೈತರು ಮಾರಾಟಮಾಡಿದ್ದು ಶೇ25ರಷ್ಟು ಮಾತ್ರ ಉಳಿದಿದೆ. ವರ್ತಕರು ಶೇಂಗಾ ಕಾಳಿನ ಉತ್ಪನ್ನ ಮಾರಾಟವನ್ನು ಮಹಾರಾಷ್ಟ್ರ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಗಿಸುವುದು ವಾಡಿಕೆ.

ಆದರೆ ಕೋವಿಡ್‌ ಸಮಸ್ಯೆ ಹೆಚ್ಚಿದ್ದರಿಂದ ಆ ರಾಜ್ಯವನ್ನು ಮೊದಲೇ ಲಾಕ್‌ಡೌನ್‌ ಮಾಡಿದ್ದರಿಂದ ವರ್ತಕರು ಇಲ್ಲಿ ಶೇಂಗಾ ಖರೀದಿ ಪ್ರಕ್ರಿಯೆ ಸದ್ಯ ಮಂದಗತಿಯಲ್ಲಿ ಸಾಗಿದೆ. ಖರೀದಿಸಿದ ಶೇಂಗಾವನ್ನು ಮಹಾರಾಷ್ಟ್ರ ಹೊರತುಪಡಿಸಿ ತಮಿಳುನಾಡಿಗೆ ಸಾಗಣೆ ಮಾಡಲಾಗುತ್ತಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

‘ಇನ್ನು ಅಲ್ಪಸ್ವಲ್ಪ ಉಳಿದಿರುವ ಸಜ್ಜೆ, ಮೆಕ್ಕೆಜೋಳ, ಹುರುಳಿ ಕನಿಷ್ಟ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಹೆಚ್ಚಿನ ಕೃಷಿ ಉತ್ಪನ್ನಗಳು ಇಲ್ಲದ ಕಾರಣ ಜನತಾ ಲಾಕ್‌ಡೌನ್ ಮಾರುಕಟ್ಟೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿಲ್ಲ’ ಎಂದು ಎಪಿಎಂಸಿ ಗಂಜ್ ವರ್ತಕರ ಸಂಘದ ಅಧ್ಯಕ್ಷ ಮಹಾಂತಯ್ಯ ಅರಳೆಲೆಮಠ ವಿವರಿಸಿದರು.

‘ರೈತರ ಬಹುತೇಕ ಕೃಷಿ ಉತ್ಪನ್ನಗಳು ಈಗಾಗಲೇ ಮಾರಾಟವಾಗಿವೆ, ಸ್ವಲ್ಪ ಪ್ರಮಾಣದ ಶೇಂಗಾ ಆವಕವಾಗುತ್ತಿದ್ದು ದಲ್ಲಾಳಿ ಅಂಗಡಿಗಳ ಮಟ್ಟದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಜನ ಗುಂಪುಗೂಡದಂತೆ ಕೋವಿಡ್‌ ನಿಯಮಗಳನ್ನು ಪಾಲಿಸಲಾಗುತ್ತಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ನೀಲಪ್ಪ ಶೆಟ್ಟರ ತಿಳಿಸಿದರು.

ಕಣಗಳಲ್ಲಿಯೇ ಉಳಿದ ಭತ್ತದ ರಾಶಿ

ಗಂಗಾವತಿ: ಕೊರೊನಾ ಲಾಕ್‌ಡೌನ್‌ ಕಾರಣ ವರ್ತಕರು ಭತ್ತ ಖರೀದಿಗೆ ಮುಂದಾಗುತ್ತಿಲ್ಲ. ಸದ್ಯ ಭತ್ತವನ್ನು ಕೇಳುವವರೂ ಇಲ್ಲದಂತಾಗಿದೆ. ಆದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲ್ಲೂಕಿನ ಗಂಗಾವತಿ, ಮರಳಿ, ಸಿದ್ದಾಪೂರ, ಢಣಾಪೂರ, ಮುಷ್ಟೂರು, ವೆಂಕಟಗಿರಿ, ಆನೆಗೊಂದಿ, ಚಿಕ್ಕಜಂತಕಲ್, ಬಸಾಪಟ್ಟಣ, ಕಾರಟಗಿ ಸೇರಿ ಒಟ್ಟು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಈಗಾಗಲೇ ತಾಲ್ಲೂಕು ವ್ಯಾಪ್ತಿಯಲ್ಲಿ ರೈತರು ಭತ್ತ ಕಟಾವು ಮಾಡಿಕೊಂಡು ಜಮೀನು, ರಸ್ತೆ ಹಾಗೂ ಮೈದಾನಗಳಲ್ಲಿ ರಾಶಿ ಹಾಕಿಕೊಂಡು ವರ್ತಕರಿಗಾಗಿ ಕಾಯುತ್ತಿದ್ದಾರೆ.

ಬೆಲೆ ಇದ್ದರೂ ಬೇಡಿಕೆ ಇಲ್ಲ: ತಾಲ್ಲೂಕಿನ ಅತಿ ಹೆಚ್ಚು ಆರ್.ಎನ್‍.ಆರ್ ಹಾಗೂ ಕಾವೇರಿ ಸೋನಾ ಬೆಳೆಯಲಾಗಿದೆ. ಮಾರುಕಟ್ಟೆಯಲ್ಲಿ ಆರ್.ಎನ್‍.ಆರ್ 75 ಕೆ.ಜಿಗೆ ₹1,130 ರಿಂದ ₹1,150 ಇದೆ. ಇನ್ನೂ ಕಾವೇರಿ ಸೋನಾ 75 ಕೆ.ಜಿಗೆ ₹1,200 ರಿಂದ ₹1,220 ನಿಗದಿ ಮಾಡಲಾಗಿದೆ. ಆದರೆ ವರ್ತಕರು ಮಾತ್ರ ಭತ್ತದ ರಾಶಿಗಳ ಕಡೆಗೆ ಮುಖ ಮಾಡುತ್ತಿಲ್ಲ. ರೈತರೇ ಅನಿವಾರ್ಯವಾಗಿ ವರ್ತಕರ ಅಂಗಡಿಗಳನ್ನು ಹುಡುಕಿಕೊಂಡ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT