ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುಣಚಿ: ರಕ್ತದಾನ ಶಿಬಿರ

Last Updated 15 ಜನವರಿ 2022, 8:41 IST
ಅಕ್ಷರ ಗಾತ್ರ

ಹನುಮಸಾಗರ: ರಕ್ತದಾನ ದೇಶ ಸೇವೆಯ ಒಂದು ಭಾಗವಾಗಿದ್ದು, ಯುವಕರು ದೇಶಾಭಿಮಾನದಿಂದ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ಶಿಕ್ಷಕ ಈಶಪ್ಪ ನಾಗನಹಳ್ಳಿ ಹೇಳಿದರು.

ಗುರುವಾರ ಸಮೀಪದ ಯಲಬುಣಚಿ ಗ್ರಾಮದಲ್ಲಿ ವಿವೇಕ ಭಾರತ ಯುವಕ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ರಕ್ತದಿಂದ ಬಳಲುತ್ತಿರುವ ಹಾಗೂ ಕಷ್ಟದಲ್ಲಿರುವರಿಗೆ ಸಹಾಯ ಮಾಡಿ ಇನ್ನೊಂದು ಜೀವವನ್ನು ಉಳಿಸಿದಂತಾಗುತ್ತದೆ ಎಂದರು.

ಪ್ರಮುಖರಾದ ವೆಂಕಟೇಶ ನಾಯಕ, ಗ್ರಾ.ಪಂ.ಉಪಾಧ್ಯಕ್ಷ ಮುರ್ತುಜಸಾಬ ಹೂಲಗೇರಿ, ಮುಖ್ಯಶಿಕ್ಷಕ ಹನುಮಂತ ಬೋದೂರ, ಗ್ರಾ.ಪಂ.ಸದಸ್ಯರಾದ ಭೀಮೇಶ ಕುಂಟೋಚಿ, ರಾಜಾಸಾಬ ನಧಾಪ್, ದಾದೇಸಾಬ ಗೌಡರ, ಸಂಗಪ್ಪ ಗುಡಿ, ಮಾರುತಿ ರಾಠೋಡ, ಮುಖಂಡರಾದ ದುರಗೇಶ ಮ್ಯಾಗಲಮನಿ, ಮಾರುತಿ ಕುಂಟೋಜಿ, ಹುಸ್ಮನಸಾಬ ಪಾಟೀಲ್, ರಾಜಾಸಾಬ ಸುಂಕದ, ಅಡಿವೆಪ್ಪ ಮ್ಯಾಗೇರಿ, ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT