ಬುಧವಾರ, ಮೇ 12, 2021
24 °C

ನಿಯಮ ಪಾಲನೆಯಿಂದ ಸೋಂಕು ದೂರ: ಹಿರೇಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಳವಂಡಿ: ‘ಮಾರ್ಗಸೂಚಿ ಪಾಲನೆ ಕೊರೊನಾ ಸೋಂಕಿಗೆ ಮದ್ದು. ಜನ ಗುಂಪು ಗುಂಪಾಗಿ ಸೇರಬಾರದು’ ಎಂದು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮಂಜುನಾಥಯ್ಯ ಹಿರೇಮಠ ಹೇಳಿದರು.

ಅಳವಂಡಿ ಸಮೀಪದ ಕವಲೂರ ಹಾಗೂ ಗುಡಗೇರಿ ಗ್ರಾಮಗಳಲ್ಲಿ ಕೊರೊನಾ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ
ಮಾತನಾಡಿದರು.

ಪ್ರತಿಯೊಬ್ಬರೂ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು. 45 ವರ್ಷ ಮೇಲ್ಪಟ್ಟ ಹಾಗೂ ಇತರರು ಕೊರೊನಾ ಲಸಿಕೆ ಪಡೆದುಕೊಳ್ಳಬೇಕು. ಲಸಿಕೆಯಿಂದ ಅಡ್ಡಪರಿಣಾಮಗ
ಳಾಗುವುದಿಲ್ಲ. ಅರ್ಹರು ಲಸಿಕೆ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಅಧ್ಯಕ್ಷೆ ಜ್ಯೋತಿ ಮಾಹಾಂತೇಶ ಸಿಂದೋಗಿಮಠ, ಸಿಬ್ಬಂದಿ ಲಿಂಗರಾಜ್, ಅಶೋಕ, ಷರೀಫ್, ವೇಂಕಟೇಶ, ಮುಖಂಡರಾದ ಮಾಹಾಂತೇಶ ಸಿಂದೋಗಿಮಠ ಹಾಗೂ ಗ್ರಾ.ಪಂ ಸದಸ್ಯರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.