ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಳವಂಡಿ | ನಿರಂತರ ವಿದ್ಯುತ್ ಪೂರೈಕೆಗೆ ಆಗ್ರಹ

Published 20 ಡಿಸೆಂಬರ್ 2023, 15:58 IST
Last Updated 20 ಡಿಸೆಂಬರ್ 2023, 15:58 IST
ಅಕ್ಷರ ಗಾತ್ರ

ಅಳವಂಡಿ: ಪ್ರಸಕ್ತ ವರ್ಷ ಮುಂಗಾರು ಮಳೆ ಇಲ್ಲದೆ ಖುಷ್ಕಿ ಜಮೀನಿನಲ್ಲಿ ಬೆಳೆದ ಫಸಲು ಒಣಗಿ ಹೋಗಿದೆ. ಬೋರ್‌ವೆಲ್ ಮೂಲಕ ರೈತರು ಬೆಳೆಯನ್ನು ಬೆಳೆದಿದ್ದಾರೆ. ಕಾರಣ ರೈತರಿಗೆ ನಿರಂತರವಾಗಿ ಹಗಲಿನ ವೇಳೆಯಲ್ಲಿ ವಿದ್ಯುತ್ ಪೂರೈಸಬೇಕು ಎಂದು ಪಂಪ್‌ಸೆಟ್ ನೀರಾವರಿ ಹೋರಾಟ ಸಮಿತಿಯ ಸಂಚಾಲಕ ಶರಣಪ್ಪ ಜಡಿ ಹೇಳಿದರು.

ಗ್ರಾಮದ ಸಿದ್ದೇಶ್ವರ ಮಠದಲ್ಲಿ ಅಳವಂಡಿ ಭಾಗದ ಪಂಪ್‌ಸೆಟ್ ನೀರಾವರಿ ಹೋರಾಟ ಸಮಿತಿಯ ಸದಸ್ಯರ ಸಭೆಯಲ್ಲಿ ಬುಧವಾರ ಅವರು ಮಾತನಾಡಿದರು. ನಂತರ ರೈತರಿಗೆ ಹಗಲು ವೇಳೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಸಲುವಾಗಿ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಮನವಿ ಸಲ್ಲಿಸಿ ವಾರದೊಳಗೆ ಸಮಸ್ಯ ಪರಿಹರಿಸದಿದ್ದರೆ ಹೋರಾಟ ಮಾಡುವ ಬಗ್ಗೆ ನಿರ್ಧರಿಸಲಾಯಿತು.

ಜಿಲ್ಲಾ ಪರಿಷತ್ ಮಾಜಿ ವಿರೋಧ ಪಕ್ಷದ ನಾಯಕ ಗುರುಮೂತಿಸ್ವಾಮಿ ಇನಾಮದಾರ ಮಾತನಾಡಿದರು.

ಸಿದ್ದೇಶ್ವರ ಮಠದಮರುಳಾರಾದ್ಯ ಶಿವಾಚಾರ್ಯ ಸ್ವಾಮಿಜಿ, ಪ್ರಮುಖರಾದ ದೇವಪ್ಪ ಕಟ್ಟಿಮನಿ, ರಮೇಶ ಭಾವಿಹಳ್ಳಿ, ಬೀಮರಡ್ಡಿ ಗದ್ದಿಕೇರಿ, ಚಂದ್ರಪ್ಪ ಜಂತ್ಲಿ, ಚನ್ನಪ್ಪ ಮುತ್ತಾಳ, ಹನುಮಂತಪ್ಪ ಉಂಕಿ, ಕಾಶಯ್ಯ, ಅರವಿಂದಪ್ಪ, ಗೂಳರಡ್ಡಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT