ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಬಗೇರಿ ಗ್ರಾ.ಪಂ: ‘ದುಡಿಯೋಣ ಬಾ’ ಅಭಿಯಾನಕ್ಕೆ ಚಾಲನೆ

382 ಕಾರ್ಮಿಕರಿಂದ ಅರ್ಜಿ ಸ್ವೀಕಾರ
Last Updated 25 ಮಾರ್ಚ್ 2021, 3:00 IST
ಅಕ್ಷರ ಗಾತ್ರ

ಲೇಬಗೇರಿ (ಕೊಪ್ಪಳ): ತಾಲ್ಲೂಕಿನ ಲೇಬಗೇರಿ ಗ್ರಾಮ ಪಂಚಾಯಿತಿಯಲ್ಲಿ ‘ದುಡಿಯೋಣ ಬಾ’ ಅಭಿಯಾನಕ್ಕೆಬುಧವಾರ ಚಾಲನೆ ನೀಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಪ್ಪ ದೊಡ್ಡನಿಂಗಪ್ಪ ದೊಡ್ಡಮನಿ ಮತ್ತುಪಿಡಿಒ ಸಂಗಮೇಶ ತೇರಿನ್ 382 ಕೂಲಿಕಾರರಿಂದ ನಮೂನೆ-6 ಅನ್ನು ಸ್ವೀಕರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಐ.ಇ.ಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ,‘ಬೇಸಿಗೆಯಲ್ಲಿ 60 ದಿನ ಕೆಲಸ ಒದಗಿಸಲಾಗುವುದು. ಇದರ ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.

ಏ.1 ರಿಂದ ಕೂಲಿ ಮೊತ್ತ ಪ್ರತಿ ದಿನಕ್ಕೆ ₹275 ರಿಂದ ₹289 ಹೆಚ್ಚಳವಾಗಿರುತ್ತದೆ. ಎಲ್ಲ ಕೂಲಿಕಾರರು ಅಳತೆಗೆ ತಕ್ಕಂತೆ ಕೂಲಿ ಕೆಲಸ ನಿರ್ವಹಿಸಿ ₹289 ಮತ್ತು ಗುದ್ದಲಿ ಸಲಿಕೆ ಹರಿತಗೊಳಿಸಲು ₹10, ಒಟ್ಟು ₹299 ಗಳನ್ನು ಪಡೆಯಬಹುದಾಗಿರುತ್ತದೆ. 20 ರಿಂದ 25 ಕೂಲಿಕಾರರಿಗೆ ಒಬ್ಬ ಕಾಯಕ ಬಂಧುವನ್ನು ನೇಮಿಸಿಕೊಂಡಿದ್ದು ಅವರಿಗೆ ಈಚೆಗೆ ಹೆಚ್ಚಿನ ಜವಾಬ್ದಾರಿ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅವರು ಸಹ ಎಲ್ಲ ಕೂಲಿಕಾರರಿಂದ ಸರಿಯಾದ ಅಳತೆಯ ಕೆಲಸವನ್ನು ಪಡೆದು ಕೂಲಿ ಮೊತ್ತವನ್ನು ಸಂಪೂರ್ಣವಾಗಿ ಪಡೆಯಲು ಕ್ರಮವಹಿಸಬೇಕು. ಎಲ್ಲ ಕೂಲಿಕಾರರು ಗುಳೆ ಹೋಗದೆ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ದೊರೆಯುವ 100 ದಿನಗಳ ನಿರಂತರ ಕೂಲಿ ಕೆಲಸ ಪಡೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.

ಎನ್.ಆರ್.ಎಲ್.ಎಂ ಸಂಯೋಜಕ ಸುನೀಲ್ ಕುಮಾರ ಮಾತನಾಡಿದರು.

ಪಿಡಿಒಸಂಗಮೇಶ ತೇರಿನ್ ಮಾತನಾಡಿ,‘ಏ.1 ರಿಂದ ನಮ್ಮ ಗ್ರಾಮ ಪಂಚಾತಿಯಿಂದಎಲ್ಲ ಕೂಲಿಕಾರರಿಗೆ ಕೂಲಿ ಕೆಲಸ ನೀಡಲು ಕ್ರಮವಹಿಸಲಾಗುವುದು. 32,000 ಮಾನವ ದಿನಗಳ ಗುರಿ ಇದ್ದು, 37,995 ಸಾಧನೆ ಒಟ್ಟು ಶೇ 118 ಪ್ರಗತಿ ಸಾಧಿಸಲಾಗಿದೆ. 2021-22ನೇ ಸಾಲಿನ ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ಸಾಧಿಸಲಾಗುವುದು’ ಎಂದರು. ಗ್ರಾ.ಪಂ ಸದಸ್ಯರಾದ ಮಲ್ಲಪ್ಪ ಟುಬಾಕಿ, ಬಾಳಪ್ಪ ಬೂದಗುಂಪಿ ಸಿದ್ದಮ್ಮ ಬಂಗಾರಿ, ಪಾರವ್ವ ಭೋವಿ, ಭೀಮಾಂಭಿಕಾ ತಾವರಗೇರಿ, ಫಕೀರಗೌಡ ರಘುಪತಿಗೌಡ, ಗ್ರಾಮ ಪಂಚಾಯತ ಕಾರ್ಯದರ್ಶಿ ಪೂರ್ಣೇಂದ್ರಸ್ವಾಮಿ ಭೂಸನೂರಮಠ, ಗಣಕಯಂತ್ರ ನಿರ್ವಾಹಕ ಬಸವರಾಜ ನಿಂಗಪ್ಪ ಮೆತಗಲ್, ಸಿಬ್ಬಂದಿಗಳಾದ ರಾಜಪ್ಪ ಬಂಗಾರಿ, ನಿಂಗಪ್ಪ ನಿಟ್ಟಾಲಿ, ಕೂಲಿಕಾರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT