ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ಯಾರಂಟಿ ಯೋಜನೆಯಲ್ಲೇ ಸರ್ಕಾರ ಕಾಲಹರಣ’

Published 27 ಏಪ್ರಿಲ್ 2024, 15:28 IST
Last Updated 27 ಏಪ್ರಿಲ್ 2024, 15:28 IST
ಅಕ್ಷರ ಗಾತ್ರ

ಕುಕನೂರು: ಕೇವಲ ಗ್ಯಾರಂಟಿ ಯೋಜನೆಗಳಲ್ಲೇ ಕಾಲಹರಣ ಮಾಡಿ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ ಟೀಕಿಸಿದರು.

ತಾಲ್ಲೂಕಿನ ಬೆಣಕಲ್, ಮಸಬಹಂಚಿನಾಳ ಗ್ರಾಮದಲ್ಲಿ ಜರುಗಿದ ಬಿಜೆಪಿ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

‘ಸೋಲುತ್ತೇವೆ ಎಂದು ಗ್ಯಾರಂಟಿ ಯೋಜನೆ ತಂದು ರಾಜ್ಯದ ಬೊಕ್ಕಸ ಖಾಲಿ ಮಾಡುತ್ತಿದ್ದಾರೆ. ಜನತೆ ಸ್ವಾವಲಂಬನೆಯಿಂದ ಬದುಕುವ ಯೋಜನೆಯನ್ನು ಸರ್ಕಾರ ಜಾರಿಗೆ ತರಬೇಕು’ ಎಂದರು.

ಈಶಪ್ಪ ಆರೇರ್, ವೀರಣ್ಣ ಅಂಗಡಿ, ವೀರಣ್ಣ ಹುಬ್ಬಳ್ಳಿ, ಮಾರುತಿ ಗಾವರಾಳ, ಪ್ರಮುಖರಾದ ಸಿ.ಎಚ್ ಪಾಟೀಲ್, ಶರಣಪ್ಪ ಈಳಗೇರ, ಶರಣಪ್ಪ ಗುಂಗಾಡಿ, ಶ್ರೀನಿವಾಸ ತಿಮ್ಮಾಪೂರ, ಶಿವಕುಮಾರ ನಾಗಲಾಪೂರಮಠ, ನೀಲಪ್ಪ ಬೆಣಕಲ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT