ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಗಿರಿ: ತುಂಬಿ ಹರಿದ ತ್ರಿವೇಣಿ ಸಂಗಮ

Published 27 ಮೇ 2024, 15:22 IST
Last Updated 27 ಮೇ 2024, 15:22 IST
ಅಕ್ಷರ ಗಾತ್ರ

ಕನಕಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆ ಸುರಿದಿದೆ. ಇಲ್ಲಿನ ಕನಕಾಚಲಪತಿ ದೇಗುಲದ ಮುಂದಿರುವ ತ್ರಿವೇಣಿ ಸಂಗಮ (ಹಳ್ಳ) ಮಳೆಯಿಂದ ತುಂಬಿ ಹರಿದಿದೆ.

ಕಳೆದ ಎರಡು–ಮೂರು ವರ್ಷಗಳಿಂದಲೂ ನೀರಿಲ್ಲದ ಸೊರಗಿದ್ದ ಈ ಹಳ್ಳ ಭರ್ತಿಯಾಗಿದ್ದನ್ನು ತಿಳಿದ ಯುವಕರು ಹಳ್ಳದತ್ತ ಧಾವಿಸಿದರು. ಖುಷಿಯಿಂದ ವೀಕ್ಷಿಸಿ ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡರು.

ಅರ್ಧ ಗಂಟೆ ಕಾಲ ಸುರಿದ ಮಳೆಯಿಂದ ಕಾಲೇಜಿನ ರಸ್ತೆಯಲ್ಲಿ ಕುಡಿಯುವ‌ ನೀರಿನ‌ ಯೋಜನೆಗಾಗಿ ಹಾಕಿದ್ದ ಪೈಪ್‌ಗಳು ಮೇಲಕ್ಕೆ ಕಾಣಿಸಿಕೊಂಡಿವೆ. ಹುಲಿಹೈದರ, ನವಲಿ ಭಾಗದಲ್ಲಿಯೂ ಧಾರಾಕಾರ ಮಳೆ ಬಿದ್ದಿದ್ದು ರೈತಾಪಿ ವರ್ಗದವರು ಸಂತಸಗೊಂಡಿದ್ದಾರೆ.

‘ತಿಂಗಳಲ್ಲಿ ನಾಲ್ಕು ಸಲ ಸುರಿದ ಮಳೆ ಹರ್ಷ ತಂದಿದೆ. ಬಿತ್ತನೆ ಕಾರ್ಯ ಮತ್ತಷ್ಟು ಚುರುಕುಗೊಳ್ಳಲಿದೆ’ ಎಂದು ರೈತ ಸೋಮಶೇಖರ ಕಮ್ಮಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT