ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಮರಡ್ಡಿ ಮಲ್ಲಮ್ಮ ಮಹಿಳೆಯರ ಮುಕುಟಮಣಿ

Published 10 ಮೇ 2024, 16:11 IST
Last Updated 10 ಮೇ 2024, 16:11 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿನ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮರ ಜಯಂತಿಯನ್ನು ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು.

 ಮಲ್ಲಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ‌ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ರೆಡ್ಡಿ ಕಾಲೊನಿ, ಸಹಕಾರಿ ಸಂಘದ‌ ಕಚೇರಿ, ಮೋಚಿ ಹಾಗೂ ಭೋವಿ ಕಾಲೊನಿ‌ಯಿಂದ ರಾಜಬೀದಿ ಮೂಲಕ ಕನಕಾಚಲಪತಿ ದೇಗುಲದ ವರೆಗೆ ಸಡಗರ, ಸಂಭ್ರಮದಿಂದ‌ ಮೆರವಣಿಗೆ ನಡೆಯಿತು.

ದೇಗುಲದಲ್ಲಿ ‌ವಿಶೇಷ ಪೂಜೆ ಸಲ್ಲಿಸಿದ ನಂತರ ಮಲ್ಲಮ್ಮ ವೃತ್ತ ತಲುಪಿತು.
ಮಹಿಳೆಯರು ಕುಂಭ, ಕಳಸ ಹೊತ್ತು ಭಾಗವಹಿಸಿದ್ದರು. ತಾಷ‌ ಮೇಳ ಗಮನ ಸೆಳೆಯಿತು.

ಪ್ರಮುಖರಾದ ಸುದರ್ಶನರೆಡ್ಡಿ ಬಿಎಂ ಸೂಗೂರು, ಮನೋಹರರೆಡ್ಡಿ ಬೇರ್ಗಿ,‌ಮಂಜುನಾಥ ರೆಡ್ಡಿ ಮಾದಿನಾಳ, ವಿಶ್ವನಾಥ ರೆಡ್ಡಿ ಓಣಿಮನಿ, ಕನಕರೆಡ್ಡಿ ಕೆರಿ, ಅಯ್ಯನಗೌಡ ಅರಳಹಳ್ಳಿ , ಯಂಕಾರೆಡ್ಡಿ ಕೆರಿ, ರಮೇಶ ರೆಡ್ಡಿ ಓಣಿಮನಿ, ಗಣೇಶರಡ್ಡಿ ಭಾಗವಹಿಸಿದ್ದರು.

ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿಶ್ವನಾಥ ಮುರುಡಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಕುಟುಂಬದಿಂದ ಎಷ್ಟೇ ಶೋಷಣೆಗೆ ಒಳಗಾಗಿದ್ದರೂ ಸಹ ತನ್ನ ತಾಳ್ಮೆ ಹಾಗೂ ಭಕ್ತಿಯಿಂದ ಇಡೀ ಕುಟುಂಬವನ್ನು ಉತ್ತಮವಾಗಿ ನಡೆಸಿ ಮಹಿಳೆಯರ ಕಣ್ಮಣಿಯಾಗಿದ್ದಾರೆ ಎಂದು ಹೇಳಿದರು. ಹೇಮರೆಡ್ಡಿ ಮಲ್ಲಮ್ಮಳು ಇಡೀ ಮಹಿಳೆಯರಿಗೆ ಮುಕುಟಮಣಿಯಾಗಿದ್ದಾರೆ’ ಎಂದರು.

ಗ್ರೇಡ್-2 ತಹಶೀಲ್ದಾರ್ ವಿರೂಪಾಕ್ಷಪ್ಪ ಹೊರಪೇಟೆ, ಪಟ್ಟಣ‌ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಶಿವರಾಜ ಭೋವಿ, ಗುರುಲಿಂಗಯ್ಯ, ಭಾಸ್ಕರರೆಡ್ಡಿ ಕೆರಿ, ಶಿವಕುಮಾರ ಮ್ಯಾಗೇರಿ ಹಾಜರಿದ್ದರು.

ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಬಸವೇಶ್ವರ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿ ಯಲ್ಲಿ ಇಒ ವೀರೇಂದ್ರಕುಮಾರ, ಸಹಾಯಕ ನಿರ್ದೇಶಕ ಚಂದ್ರಶೇಖರ ಕಂದಕೂರು, ಕೊಟ್ರಯ್ಯ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT