ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ ಉತ್ಸವ: ಜಾಗ ಪರಿಶೀಲಿಸಿದ‌ ಅಧಿಕಾರಿಗಳು

Published 9 ಫೆಬ್ರುವರಿ 2024, 16:24 IST
Last Updated 9 ಫೆಬ್ರುವರಿ 2024, 16:24 IST
ಅಕ್ಷರ ಗಾತ್ರ

ಕನಕಗಿರಿ: ಮಾ.2 ಮತ್ತು 3 ರಂದು ಪಟ್ಟಣದಲ್ಲಿ ನಡೆಯಲಿರುವ ಕನಕಗಿರಿ ಉತ್ಸವದ ಜಾಗವನ್ನು ಅಧಿಕಾರಿಗಳು ಪರಿಶೀಲಿಸಿದರು.

ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರಕ್ಕೆ ಹೋಗುವ ರಸ್ತೆಯಲ್ಲಿರುವ ನಾರಾಯಣಪ್ಪ ಬಲಿಜ (ಪಾತ್ರದ) ಅವರ ಹೊಲವನ್ನು ಅಧಿಕಾರಿಗಳು ಹಾಗೂ ಗಣ್ಯರು ವೀಕ್ಷಿಸಿದರು.

ಉತ್ಸವದ ನಿಮಿತ್ತ ಆಯೋಜಿಸಿರುವ ಕ್ರೀಡಾಕೂಟಗಳನ್ನು ಸರ್ಕಾರಿ‌ ಪದವಿ ಪೂರ್ವ ಕಾಲೇಜು ಹಾಗೂ ರುದ್ರಸ್ವಾಮಿ ಪ್ರೌಢಶಾಲೆಯ ಮೈದಾನವನ್ನು ಪರಿಶೀಲಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಪಿಯು ಕಾಲೇಜು ಮಾರ್ಗವಾಗಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆ ಡಾಂಬರೀಕರಣಗೊಳಿಸಲಾಗುತ್ತಿದೆ, ಉತ್ಸವಕ್ಕೆ ಬರುವ ಸಾರ್ವಜನಿಕರಿಗೆ ಶೌಚಾಲಯ‌ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡಲಾಗುವುದು,‌ ಪುಷ್ಕರಣಿ‌ಯನ್ನು ಸಹ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮುಖ್ಯಮಂತ್ರಿ,‌ ಉಪ ಮುಖ್ಯಮಂತ್ರಿ ಹಾಗೂ ಚಲನಚಿತ್ರ ನಟರು ಬರುವ ಸಾಧ್ಯತೆ‌ ಇರುವದರಿಂದ ಹೆಲಿಪ್ಯಾಡ್ ನಿರ್ಮಾಣದ ಜಾಗವನ್ನು ಇದೇ ಸಮಯದಲ್ಲಿ ಪರಿಶೀಲಿಸಲಾಯಿತು.

ತಹಶೀಲ್ದಾರ್ ವಿಶ್ವನಾಥ ಮುರುಡಿ, ಜಿಲ್ಲಾ‌ ಪಂಚಾಯಿತಿ ಕಾರ್ಯ‌ನಿರ್ವಹಕಾಧಿಕಾರಿ ವಿಜಯಕುಮಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಎಂಜಿನಿಯರ್ ಮಂಜುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ‌ ಕಲ್ಲಬಾಗಿಲಮಠ, ವಕ್ತಾರ ಶರಣಬಸಪ್ಪ ಭತ್ತದ,‌ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶಪ್ಪ ಸಮಗಂಡಿ ಸೇರಿದಂತೆ‌ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ‌ ಮುಖಂಡರು ಹಾಜರಿದ್ದರು.

ಉತ್ಸವದ ಮುಖ್ಯ ವೇದಿಕೆಯ‌ ಜಾಗವನ್ನು ನೀಡಿದ ರೈತ ನಾರಾಯಣಪ್ಪ ಅವರು ಆ ಜಾಗದಲ್ಲಿ ಬೋರ್‌ವೆಲ್‌ ಕೊರೆಯಿಸಿ ಸೇತುವೆ‌ ನಿರ್ಮಾಣ‌ ಮಾಡಿ‌ಕೊಡಬೇಕು ಎಂದು ಮನವಿ ಮಾಡಿಕೊಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT