ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಟಗಿ: ದೇವಿ ಮಾಂಗಲ್ಯ ಕದ್ದ ಕಳ್ಳರು

Published 3 ಜನವರಿ 2024, 16:01 IST
Last Updated 3 ಜನವರಿ 2024, 16:01 IST
ಅಕ್ಷರ ಗಾತ್ರ

ಕಾರಟಗಿ: ಪಟ್ಟಣದ 7ನೇ ವಾರ್ಡಿನಲ್ಲಿರುವ ಐತಿಹಾಸಿಕ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು ದೇವಿಯ ಮಾಂಗಲ್ಯವನ್ನೇ ಕಳ್ಳರು ದೋಚಿದ್ದಾರೆ.

ಈ ದೇವಸ್ಥಾನ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದ್ದು ಬೀಗ ಮುರಿದು ಕಳ್ಳತನ ನಡೆಸಲಾಗಿದೆ. ಕಳವು ಆಗಿರುವ ಮಾಂಗಲ್ಯದ ಮೌಲ್ಯ ₹10 ಸಾವಿರ ಎಂದು ಅಂದಾಜಿಸಲಾಗಿದೆ. ಕೃತ್ಯ ಎಸಗುವ ಮೊದಲು ಕಳ್ಳರು ದೀಪಹಚ್ಚಿ ಪೂಜೆ ಸಲ್ಲಿಸಿರುವುದು ಕಂಡುಬಂದಿದೆ.

ಎಎಸ್‌ಐ ಬೋರಣ್ಣ, ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT