ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಭಾರತದ ಧಾರ್ಮಿಕ ರಾಯಭಾರಿ ಸೇವಾಲಾಲ್‌’

Published 15 ಫೆಬ್ರುವರಿ 2024, 15:56 IST
Last Updated 15 ಫೆಬ್ರುವರಿ 2024, 15:56 IST
ಅಕ್ಷರ ಗಾತ್ರ

ಕುಕನೂರು: ಭರತ ಖಂಡದ ಧಾರ್ಮಿಕ ಪರಂಪರೆಯ ರಾಯಭಾರಿ ಸೇವಾಲಾಲ್‌ ಎಂದು ಗ್ರೇಡ್-2 ತಹಶೀಲ್ದಾರ್ ಮುರಳಿಧರ್ ಕುಲಕರ್ಣಿ ಹೇಳಿದರು. ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿಯಲ್ಲಿ ಮಾತನಾಡಿದರು.

ಸೇವಾಲಾಲರು ತಮ್ಮ ಸಾಮಾಜಿಕ ಕಾರ್ಯಗಳಿಂದ ಇಂದಿಗೂ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ ಎಂದು ಅಭಿಪ್ರಾಯಪಟ್ಟರು. ಸಮಾಜದ ಮುಖಂಡ ಸುರೇಶ ಬಳೂಟಗಿ ಮಾತನಾಡಿ, ಸದ್ಗರು ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮಾಜ ಸರಿದಂತೆ ಎಲ್ಲರಿಗೂ ಸನ್ಮಾರ್ಗದ ಬೋಧನೆ ಮಾಡಿದರು. ಎಲ್ಲ ಸಂತ ಶರಣರು ಹೇಳಿದ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕಿದೆ ಎಂದರು.

ಹೂಬಪ್ಪ ಚವ್ಹಾಣ, ದೇವೇಂದ್ರಪ್ಪ ರಾಠೋಡ್, ಕುಮಾರ್ ಬಳಗೇರಿ, ಚಂದ್ರು ಭಾನಾಪುರ, ಪ್ರಕಾಶ್, ವಿಶ್ವನಾಥ್, ದುರಗೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT