ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ದುರುಪಯೋಗ: ಶಿಕ್ಷಕ ಅಮಾನತು

Published 14 ಮಾರ್ಚ್ 2024, 15:44 IST
Last Updated 14 ಮಾರ್ಚ್ 2024, 15:44 IST
ಅಕ್ಷರ ಗಾತ್ರ

ಕನಕಗಿರಿ: ಸಮೀಪದ ಬೈಲಕ್ಕುಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಮಯದಲ್ಲಿ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಬಿಡುಗಡೆಯಾಗಿದ್ದ ಹಣವನ್ನು ದುರುಪಯೋಗ ಪಡಿಸಿಕೊಂಡ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯ ಸರ್ಕಾರಿ ಕಿರಿಯ ಪ್ರಾಥಮಿಕ ಇಂದಿರಾನಗರ ಶಾಲೆ ಶಿಕ್ಷಕ ಉಮೇಶ ಲಮಾಣಿ ಅವರನ್ನು ಅಮಾನತುಗೊಳಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ರಾಮಚಂದ್ರಪ್ಪ ಅವರು ಆದೇಶ‌ ಹೊರಡಿಸಿದ್ದಾರೆ.

ಶಾಲೆ ಅಕ್ಷರ ದಾಸೋಹ ಯೋಜನೆ ಖಾತೆಯ ಮೂಲಕ 81 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲು ₹ 20,088 ಜಮಾವಣೆ ಮಾಡಲಾಗಿತ್ತು. ಅದರಲ್ಲಿ 10 ಮಕ್ಕಳಿಗೆ ಜಮಾವಣೆ ಮಾಡಿ, ಉಳಿದ ಹಣವನ್ನು ನಗದು ರೂಪದಲ್ಲಿ ಈ‌ ಹಿಂದೆ ಕೆಲಸ ಮಾಡಿದ ಶಾಲೆಗೆ ತೆರಳಿ ನಿಯಮಬಾಹಿರವಾಗಿ
ವಿತರಿಸಲು ಮುಂದಾಗಿ, ಆನಂತರ ಶಾಲೆ ಖಾತೆಗೆ ಜಮಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

‘ಬಿಸಿಯೂಟ ಪಾತ್ರೆ ಖರೀದಿಗೆ ಬಿಡುಗಡೆಯಾಗಿದ್ದ ₹ 10 ಸಾವಿರ ಅನುದಾನದಲ್ಲಿ ₹ 2,500 ಮೊತ್ತದ ಪಾತ್ರೆ ಖರೀದಿಸಿ, ಉಳಿದ ಹಣವನ್ನು
ಬಳಸಿಕೊಂಡು, ನಂತರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸರ್ಕಾರದ ಹಣವನ್ನು‌ ನಿಗದಿತ ಉದ್ದೇಶಕ್ಕೆ ಬಳಸದೆ, ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ’ ಎಂದು ಬಿಇಒ ವೆಂಕಟೇಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT