ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ | ಸಿಡಿಲಿಗೆ ಎತ್ತು ಬಲಿ: ಪರಿಶೀಲನೆ

Published 20 ಮೇ 2024, 16:18 IST
Last Updated 20 ಮೇ 2024, 16:18 IST
ಅಕ್ಷರ ಗಾತ್ರ

ಕನಕಗಿರಿ: ತಾಲ್ಲೂಕಿನ ಬೆನಕನಾಳ ಗ್ರಾಮದ ಮನೆಯ ಆವರಣದಲ್ಲಿ ಕಟ್ಟಿಹಾಕಿದ್ದ ಎತ್ತು ಸಿಡಿಲಿಗೆ ಬಲಿಯಾದ ಘಟನೆ ಸೋಮವಾರ ನಸುಕಿನ ಜಾವ ನಡೆದಿದೆ.

ಗ್ರಾಮದ ಬೆಟ್ಟದಗೌಡ ಲಿಂಗನಗೌಡ ಎಂಬುವವರಿಗೆ ಎತ್ತು ಸೇರಿದೆ. ಗ್ರಾಮ ಲೆಕ್ಕಾಧಿಕಾರಿ ಶಿವರಾಜ ಬೋವಿ, ಪಶು ವೈದ್ಯರಾದ ಹೊನ್ನೂರುಬಾಷ, ಅಶೋಕ, ಹೆಡ್‌ ಕಾನ್‌ಸ್ಟೆಬಲ್ ಮುತ್ತಣ್ಣ ಅವರು ಸ್ಥಳಕ್ಕೆ ಭೇಟಿ ಪಂಚನಾಮೆ ಮಾಡಿದರು. ಎತ್ತು ಸಿಡಿಲಿಗೆ ಬಲಿಯಾದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಪರಿಹಾರಕ್ಕಾಗಿ ಸರ್ಕಾರಕ್ಕೆ ಮಾಹಿತಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT