ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐದು ಗ್ಯಾರಂಟಿಗಳು ದೇಶದ ಐತಿಹಾಸಿಕ ಯೋಜನೆ’: ಬಸವರಾಜ ರಾಯರಡ್ಡಿ

ಸಿ.ಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆ
Published 6 ಜನವರಿ 2024, 15:49 IST
Last Updated 6 ಜನವರಿ 2024, 15:49 IST
ಅಕ್ಷರ ಗಾತ್ರ

ಯಲಬುರ್ಗಾ: ‘ಚುನಾವಣಾ ಪೂರ್ವದಲ್ಲಿ ಮಾತುಕೊಟ್ಟಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ದೇಶದಲ್ಲಿಯೇ ಮಾದರಿ ಸರ್ಕಾರ ಎಂಬ ಹಿರಿಮೆಗೆ ನಮ್ಮ ಕಾಂಗ್ರೆಸ್‌ ಸರ್ಕಾರ ಪಾತ್ರವಾದ್ದು, ಇವುಗಳು ಐತಿಹಾಸಿಕ ಯೋಜನೆಗಳಾಗಿವೆ’ ಎಂದು ಸಿ.ಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲ್ಲೂಕಿನ ತಲಕಟ್ಟಿ ಗ್ರಾಮದಲ್ಲಿ ಆಯೋಜಿಸಿದ್ದ ನಿಲೋಗಲ್ಲ ಕೆರೆಯ ಗಂಗಾ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಸರ್ಕಾರ ಬದ್ಧತೆಯೊಂದಿಗೆ ಅಧಿಕಾರ ನಡೆಸುತ್ತದೆ. ಜನಕಲ್ಯಾಣ ಯೋಜನೆಗಳ ಮೂಲಕ ಜನಪರ ಆಡಳಿತ ಮಾಡುತ್ತಿದೆ. ರಾಜ್ಯದ ಪ್ರತಿಯೊಬ್ಬರಿಗೆ ವಿವಿಧ ರೀತಿಯಲ್ಲಿ ಯೋಜನೆಗಳ ಪ್ರಯೋಜನಗಳಾಗುತ್ತಿವೆ. ಯಶಸ್ವಿ ಯೋಜನೆಗಳ ಬಗ್ಗೆ ವಿರೋಧ ಪಕ್ಷದವರು ಅನಗತ್ಯವಾಗಿ ಟೀಕಿಸುತ್ತಿದ್ದಾರೆ ಎಂದರು.

ಅಭಿವೃದ್ಧಿ ವಿಷಯದಲ್ಲಿ ತಪ್ಪಾಗಿ ನಡೆದುಕೊಂಡಿದ್ದರೆ ಮಾಡುವ ಟೀಕೆಗಳನ್ನು ಸ್ವಾಗತಿಸುವೆ. ಆದರೆ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯ ಕೈಗೊಂಡರೂ, ಅನಗತ್ಯವಾಗಿ ಅಪಪ್ರಚಾರ ಮಾಡುವುದನ್ನು ಸಹಿಸಲು ಆಗುವುದಿಲ್ಲ. ಪ್ರತಿಕ್ಷಣ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತಿಸುವ ಪರಿಣಾಮ ಕ್ಷೇತ್ರವು ಮಾದರಿ ಕ್ಷೇತ್ರವಾಗುತ್ತಿದೆ. ಒಂದು ವರ್ಷದ ಅವಧಿಯಲ್ಲಿಯೇ ಸಾವಿರಾರು ಕೋಟಿ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ತರಲಾಗಿದೆ ಎಂದು ಹೇಳಿದರು.

ಕ್ಷೇತ್ರದ ವಿವಿಧ ಗ್ರಾಮಗಳಿಗೆ ಹೊಸ ಬಸ್ ನಿಲ್ದಾಣಕ್ಕಾಗಿ ₹ 50 ಕೋಟಿ ಮಂಜೂರಾಗಿದೆ. ಈಗಾಗಲೇ ಆರು ಪ್ರೌಢಶಾಲೆ, ಮೂರು ಕಿರಿಯ ಮಹಾವಿದ್ಯಾಲಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಿವಿಧೆಡೆ ಒಟ್ಟು 6 ಬುದ್ಧ,ಬಸವ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ. ಅದಕ್ಕಾಗಿ ಅಗತ್ಯ ಜಮೀನು ಒದಗಿಸಬೇಕಾಗಿದೆ. ಗ್ರಾಮಸ್ಥರು ಭೂಮಿ ಕೊಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ಅಧಿಕಾರಿಗಳಾದ ಜೆ.ಮಂಜುನಾಥ, ತಹಶೀಲ್ದಾರ ಬಸವರಾಜ ತೆನ್ನಳ್ಳಿ, ತಾ.ಪಂ.ಇಒ ಸಂತೋಷ ಪಾಟೀಲ್, ಸಿಪಿಐ ಮೌನೇಶ್ವರ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಹನಮಂತಗೌಡ ಪಾಟೀಲ್, ಸಾವಿತ್ರಿ ಗೊಲ್ಲರ, ಕೆಪಿಸಿಸಿ ಸದಸ್ಯೆ ಗಿರಿಜಾ ಸಂಗಟಿ, ಮುಖಂಡರಾದ ವೀರನಗೌಡ ಪಾಟೀಲ್, ಈರಪ್ಪ ಕುಡಗುಂಟಿ, ಮಲ್ಲಮ್ಮ ಗೊಂದಿ, ಫರೀದ ಬೇಗಂ, ಡಾ.ಶಿವನಗೌಡ ದಾನರಡ್ಡಿ, ಶರಣಪ್ಪ ಗಾಂಜಿ, ಮಲ್ಲು ಜಕ್ಕಲಿ, ಮಲ್ಲನಗೌಡ ಪಾಟೀಲ್, ತೇಜನಗೌಡ ಪಾಟೀಲ್, ಬಸವರಾಜ ಈಳಗೇರ, ಹಂಪಯ್ಯ ಹಿರೇಮಠ, ರಹಿಮಾನಸಾಬ ನಾಯಕ, ರಾಜು ಹಡಪದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT