ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾಕಲ್ಯಾಣ ಪಂಪ್‌ಸೆಟ್‌ಗಳು ಸದ್ಬಳಕೆಯಾಗಲಿ

ಫಲಾನುಭವಿಗಳಿಗೆ ಶಾಸಕ ಅಮರೇಗೌಡ ಬಯ್ಯಾಪುರ ಸಲಹೆ
Last Updated 27 ಜೂನ್ 2022, 4:23 IST
ಅಕ್ಷರ ಗಾತ್ರ

ಕುಷ್ಟಗಿ: ‘ಗಂಗಾ ಕಲ್ಯಾಣ ಯೋಜನೆಯಲ್ಲಿ ಸರ್ಕಾರ ನೀಡಿರುವ ಪಂಪಸೆಟ್‌ಗಳನ್ನು ಸದ್ಬಳಕೆ ಮಾಡಿಕೊಂಡು ಫಲಾನುಭವಿಗಳು ಆರ್ಥಿಕ ಪ್ರಗತಿ ಹೊಂದಬೇಕು’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಭಾನುವಾರ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2019 ರಿಂದ 2022ನೇ ವರ್ಷಗಳ ಅವಧಿಯಲ್ಲಿನ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಪಂಪ್‌ಸೆಟ್‌ ಸಲಕರಣೆಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.

ಪಂಪ್‌ಸೆಟ್‌ಗಳು ಸದ್ಬಳಕೆಯಾಗಬೇಕು. ಮಾರಾಟ ಮಾಡಿ ದುರ್ಬಳಕೆ ಮಾಡಿಕೊಳ್ಳಬಾರದು. ಅಷ್ಟೇ ಅಲ್ಲ ಕನಿಷ್ಠ ಒಂದು ಎಕರೆ ಪ್ರದೇಶದಲ್ಲಾದರೂ ಉತ್ತಮ ಬೆಳೆ ಬೆಳೆದು ಪ್ರತಿನಿಧಿಗಳು, ಅಧಿಕಾರಿಗಳನ್ನು ತಮ್ಮ ಜಮೀನುಗಳಿಗೆ ಆಹ್ವಾನಿಸಿ ಫಲಾನುಭವಿಗಳು ತಾವು ಮಾಡಿದ ಸಾಧನೆ ತೋರಿಸಿದರೆ ಸರ್ಕಾರದ ಯೋಜನೆ ಸಾರ್ಥಕವಾಗುತ್ತದೆ ಎಂದರು.

ನಿಗಮದ ಅಧಿಕಾರಿಗಳು ಕೇವಲ ಪಂಪ್‌ಸೆಟ್‌ಗಳನ್ನು ವಿತರಿಸಿದರೆ ಸಾಲದು ಫಲಾನುಭವಿಗಳು ಹೇಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯೋಜನೆ ಆಶಯ ಈಡೇರಿದೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಒಟ್ಟು 92 ಫಲಾನುಭವಿಗಳಿಗೆ ಕೊಳವೆಬಾವಿಗೆ ಅಳವಡಿಸುವ ಸಬ್‌ಮರ್ಸಿಬಲ್‌ ಮೋಟರ್‌ ಪಂಪ್‌ ಹಾಗೂ ಇತರೆ ಸಲಕರಣೆಗಳನ್ನು ವಿತರಿಸಲಾಯಿತು.

ಕಲ್ಲಪ್ಪ ತಳವಾರ, ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ, ಸದಸ್ಯರಾದ ಖಾಜಾ ಮೈನುದ್ದೀನ್‌ ಮುಲ್ಲಾ. ನಿಗಮದ ಜಿಲ್ಲಾ ವ್ಯವಸ್ಥಾಪಕ ವಿ.ಎನ್‌.ಕಾಳೆ, ತಾಲ್ಲೂಕಿನ ಕ್ಷೇತ್ರಾಧಿಕಾರಿ ಪರಸಪ್ಪ, ಸಾಮಗ್ರಿ ಪೂರೈಕೆದಾರ ದೇವೇಂದ್ರಗೌಡ ಪಾಟೀಲ, ಉಮೇಶ ಮಂಗಳೂರು ಹಾಗೂ ಮಂಜುನಾಥ ಕಟ್ಟಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT