ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ: ₹4 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ

Published 12 ಜನವರಿ 2024, 14:43 IST
Last Updated 12 ಜನವರಿ 2024, 14:43 IST
ಅಕ್ಷರ ಗಾತ್ರ

ಗಂಗಾವತಿ: ಇಲ್ಲಿನ ಮಹಾರಾಣಾ ಪ್ರತಾಪ್ ಸಿಂಗ್ ವೃತ್ತದ ಸಮೀಪ ಶುಕ್ರವಾರ ಜಿ.ಜನಾರ್ದನರೆಡ್ಡಿ ಮಹಾರಾಣಾ ಪ್ರತಾಪ್ ಸಿಂಗ್ ವೃತ್ತದಿಂದ ಇಂದಿರಾಗಾಂಧಿ ವೃತ್ತ, ಅಂಬೇಡ್ಕರ್ ನಗರದಿಂದ ಕನಕದಾಸ ಮತ್ತು ನೀಲಕಂಠೇಶ್ವರ ವೃತ್ತದವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿ, ಕೆಕೆಆರ್‌ಡಿಬಿ ಯೋಜನೆಯಡಿ ಮೊದಲ ಹಂತವಾಗಿ ₹4 ಕೋಟಿ ವೆಚ್ಚದಲ್ಲಿ ಮಹಾರಾಣಾ ಪ್ರತಾಪ್ ಸಿಂಗ್ ವೃತ್ತದಿಂದ ನೀಲಕಂಠೇಶ್ವರ ವೃತ್ತದವರೆಗೆ 2 ಬದಿ ಚರಂಡಿ, ಮಧ್ಯೆ ಡಿವೈಡರ್, ವಿದ್ಯುತ್ ದೀಪ ಅಳವಡಿಸುವ ಮೂಲಕ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಕೆಕೆಆರ್‌ಡಿಬಿ ಯೋಜನೆಯ ₹12.5 ಕೋಟಿ ಅನುದಾನಕ್ಕೆ ಗಂಗಾವತಿಯಲ್ಲಿ ಒಟ್ಟು 18 ರಸ್ತೆ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಂಡಿದ್ದು, ಸದ್ಯ ಮೊದಲ ಹಂತವಾಗಿ ಮಹಾರಾಣಾ ಪ್ರತಾಪ್ ಸಿಂಗ್ ವೃತ್ತದಿಂದ ನೀಲಕಂಠೇಶ್ವರ ವೃತ್ತದ ರಸ್ತೆ ಅಭಿವೃದ್ಧಿ ಆಗುತ್ತಿದೆ. ಉಳಿದ ಅನುದಾನದಲ್ಲಿ ಹಂತ ಹಂತವಾಗಿ ರಸ್ತೆಗಳು ಅಭಿವೃದ್ಧಿ ಆಗುತ್ತವೆ ಎಂದರು.

ಮಹಾರಾಣಾ ಪ್ರತಾಪ್ ಸಿಂಗ್ ವೃತ್ತದಿಂದ ನೀಲಕಂಠೇಶ್ವರ ವೃತ್ತದವರೆಗೆ ರಸ್ತೆ ಒತ್ತುವರಿಯಾಗಿದ್ದು, ಈ ಬಗ್ಗೆ ಜನರ ಬಳಿಗೆ ತೆರಳಿ ಸುಂದರ ರಸ್ತೆ ನಿರ್ಮಾಣಕ್ಕೆ ಎಲ್ಲರ ಸಹಕಾರ ಅ ಗತ್ಯವೆಂದು ತಿಳಿಸಿ ಮನವೊಲಿಸಿದಾಗ, ಜಾಗ ಬಿಟ್ಟುಕೊಡಲು ಒಪ್ಪಿದ್ದಾರೆ. ಗುತ್ತಿಗೆದಾರರು ಸಹ ರಸ್ತೆ ಗುಣಮಟ್ಟತೆ ವಿಚಾರ ತಗ್ಗುವಂತಿಲ್ಲ.

ಈ ಹಿಂದೆ ಆಡಳಿತ ನಡೆಸಿದ ಜನಪ್ರತಿನಿಧಿಗಳು ಗಂಗಾವತಿ ನಗರದಲ್ಲಿ ಯಾವ ಅಭಿವೃದ್ಧಿ ಕೆಲಸಗಳು ಮಾಡಿಲ್ಲ. ರಸ್ತೆಗಳು ಒತ್ತುವರಿಯಾಗಿದ್ದು, ಆ ಜಾಗ ಹಿಂಪಡೆಯಲು ಯಾರು ತೆರವು ಕಾರ್ಯಚರಣೆ ನಡೆಸಿಲ್ಲ. ನನ್ನ ಆಡಳಿತವಧಿಯಲ್ಲಿ ಸುಂದರ ಗಂಗಾವತಿ ನಿರ್ಮಿಸುವೆ ಎಂದರು.

ತರಕಾರಿ ವ್ಯಾಪಾರಸ್ಥರು ಪ್ರಮುಖ ವೃತ್ತ, ರಸ್ತೆಗಳ ಬದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ಕಾರಣ ನಗರದ ಪ್ರಮುಖ ವೃತ್ತ, ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿ ರುವ ಬಗ್ಗೆ ಮಾಹಿತಿ ಬಂದಿದೆ. ಜತೆಗೆ ಗಂಗಾವತಿ ಗುಂಡಮ್ಮ ಕ್ಯಾಂಪ್‌ನಲ್ಲಿನ ತರಕಾರಿ ಮಾರುಕಟ್ಟೆ ಖಾಲಿ ಬಿದ್ದಿದ್ದು, ಅಲ್ಲಿಗೆ ತರಕಾರಿ ವ್ಯಾಪಾರಸ್ಥರನ್ನು ಸ್ಥಳಾಂತರ ಮಾಡಲು ಸಿದ್ಧತೆ ನಡೆಸಲಾಗುತ್ತದೆ. ಫೆಬ್ರುವರಿ ತಿಂಗಳಲ್ಲಿ ಹಂಪಿ ಉತ್ಸವ ನಡೆಸಲು ಈಗಾಗಲೇ ದಿನಾಂಕ ನಿಗದಿಪಡಿಸಿ, ಸಿದ್ಧತೆಗಳು ಕೈಗೊಳ್ಳಲು ಮುಂದಾಗುತ್ತಿದ್ದು, ಹಂಪಿ ಉತ್ಸವ ಮುಗಿದ 10 ದಿನಗಳ ಒಳಗಾಗಿ ಆನೆಗೊಂದಿ ಉತ್ಸವ ನಡೆಸುವ ಬಗ್ಗೆ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ ಅವರನ್ನು ಭೇಟಿ ಮಾಡಿ, ಚರ್ಚಿಸಲಾಗುವುದು ಎಂದರು.

ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ, ನಗರ ಸಭೆ ಸದಸ್ಯ ಉಸ್ಮಾನ್ ಬಿಚ್ಚಿಗತ್ತಿ, ರಮೇಶಚೌಡ್ಕಿ, ಅಜ ಯ್ ಬಿಚ್ಚಾಲಿ ಸೇರಿ ಕೆಆರ್‌ಪಿಪಿ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT