ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಾಹಿ ಸಾವು: ಗ್ರಾಮಸ್ಥರ ಪ್ರತಿಭಟನೆ

Published 10 ಮೇ 2024, 16:11 IST
Last Updated 10 ಮೇ 2024, 16:11 IST
ಅಕ್ಷರ ಗಾತ್ರ

ಕುಕನೂರು: ತಾಲ್ಲೂಕಿನ ಚಿಕೆನಕೊಪ್ಪ ಗ್ರಾಮದಲ್ಲಿ ಕುರಿಗಾಹಿ ವೀರಪ್ಪ ಕುರಿ (55) ಎಂಬುವರು ಗುರುವಾರ ಸಂಜೆ ಕುರಿ ಮೇಯಿಸಲು ಹೋದಾಗ ಗಿಡ ಕಡಿಯುವಾಗ ಪಕ್ಕದಲ್ಲಿಯೇ ಹಾದು ಹೋಗಿರುವ ವಿಂಡ್ ಪವರ್‌ನ ತಂತಿ ತಗುಲಿ ಮೃತಪಟ್ಟಿದ್ದಾರೆ.

ವೀರಪ್ಪ ಮನೆಗೆ ಬಾರದೆ ಇದ್ದಾಗ ಕುಟುಂಬದವರು ಹುಟುಕಾಟ ಮಾಡಿದ್ದಾರೆ. ರಾತ್ರಿ 12 ಗಂಟೆ ಸುಮಾರಿಗೆ ವೀರಪ್ಪ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಗಿಡ ಕಡಿಯಲು ಬಳಸಿದ್ದ ಕೊಡಲಿ ಗಿಡದಲ್ಲಿಯೇ ಇದೆ.

ವಿಷಯ ತಿಳಿದು ಸ್ಥಳಕ್ಕೆ ತಹಶೀಲ್ದಾರ್ ಅಶೋಕ ಶಿಗ್ಗಾಂವಿ, ಸಿಪಿಐ ಮೌನೇಶ್ವರ ಪಾಟೀಲ, ಪಿಎಸ್ಐ ಟಿ. ಗುರುರಾಜ, ಗ್ರಾಮ ಲೆಕ್ಕಿಗ ಆಗಮಿಸಿದ್ದರು.

ವಿಂಡ್ ಪವರ್ ಕಂಪನಿಯವರು ವೀರಪ್ಪ ಸಾವಿಗೆ ಪರಿಹಾರ ಕೊಡಬೇಕು ಎಂದು ಈ ವೇಳೆ  ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಕಂಪನಿಯವರು ಬರುವವರೆಗೂ ಮೃತ ದೇಹವನ್ನು ತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು.

ಪೊಲೀಸರು ಮತ್ತು ಮುಖಂಡರ ಮನವರಿಕೆಯಿಂದ ಗ್ರಾಮಸ್ಥರು ವೀರಪ್ಪನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲು ಒಪ್ಪಿದರು. ವಿಂಡ್ ಪವರ್ ಕಂಪನಿ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಂಡ್ ಕಂಪನಿಯವರು ಬೇಕಾಬಿಟ್ಟಿಯಾಗಿ ವಿದ್ಯುತ್ ಕಂಬಗಳು ಅಳವಡಿಸಿದ್ದರಿಂದ ದುರ್ಘಟನೆ ಸಂಭವಿಸುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT