ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಧೀಂದ್ರ ತೀರ್ಥರ ಮಧ್ಯಾರಾಧನೆ

Published 27 ಮಾರ್ಚ್ 2024, 16:23 IST
Last Updated 27 ಮಾರ್ಚ್ 2024, 16:23 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಗ್ರಾಮ ಸಮೀಪದ ನವ ವೃಂದಾವನ ಗಡ್ಡೆಯಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ಶ್ರೀಪಾದಂಗಳ ನೇತೃತ್ವದಲ್ಲಿ ಬುಧವಾರ ಸುಧೀಂದ್ರ ತೀರ್ಥರ ಮಧ್ಯರಾಧನೆ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ನವವೃಂದಾನದಲ್ಲಿನ ಎಲ್ಲ ಬೃಂದಾವನಗಳಿಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಅಷ್ಟೋತ್ತರ ಪಾರಾಯಣ, ಮುದ್ರಾಧಾರಣೆ, ಪಂಡಿತರಿಂದ ಉಪನ್ಯಾಸ, ಭಕ್ತರಿಂದ ಭಜನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ನಂತರ ಶ್ರೀಮಠದ ಪಂಡಿತ ದ್ವಾರಕನಾಥ ಆಚಾರ ಮಾತನಾಡಿ, ಯಾರ ಬೃಂದಾವನ ನಿರ್ಮಾಣವಾದ ಮೇಲೆ ಈ ಕ್ಷೇತ್ರಕ್ಕೆ ನವವೃಂದಾವನ ಎಂಬ ಹೆಸರು ಬಂದಿತೋ, ಅವರ ಆರಾಧನೆ ಮಹೋತ್ಸವ ಜರುಗುತ್ತಿದೆ’ ಎಂದರು.

ಪಂಡಿತ ನರಹರಿಆಚಾರ, ಇಡಪನೂರ ಭೀಮಸೇನರಾವ, ಪವನ ಆಚಾರ, ಹೊಸಪೇಟೆ ಹಳೆರಾಯರ ಮಠದ ಪವನ ಆಚಾರ, ಮೋಹನ ಕನಕವೇಡು, ಯರ್ದೋಣಿ ರಾಮಕೃಷ್ಣ, ರಾಯಸ್ ಶಾಮ, ಉದಯ ಜಗಿರ್ಧಾರ, ನವಲಿ ಸುಧೀರ, ಗಂಗಾವತಿ ರಾಯರ ಮಠದ ವ್ಯವಸ್ಥಾಪಕ ಗುರುರಾಜ ಆಚಾರ್, ಇಡಪನೂರ ಸಂಜೀವ ಕುಲಕರ್ಣಿ, ಆನೆಗುಂದಿ ಶ್ರೀ ಪಾದರಾಜರ ಮಠದ ವ್ಯವಸ್ಥಾಪಕ ವಿಜಯ ದೇಸಾಯಿ ಗೋತಗಿ, ಹೇರೂರ ಗೋಪಾಲ ಕೃಷ್ಣ, ಹೇರೂರ ವಿಜಯ, ರಾಘವೇಂದ್ರ ದೇಸಾಯಿ ಕೊಪ್ಪಳ, ಇಟಗಿ ಗುರುಪ್ರಸಾದ್, ಪ್ರಾಣೇಶ ಮಾದನೂರ್, ಆನೆಗುಂದಿ ಶಾಖಾಮಠದ ವ್ಯವಸ್ಥಾಪಕ ಸುಮಂತ್ ಕುಲಕರ್ಣಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT