ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: 47 ನಿಮಿಷಗಳಲ್ಲಿ ಮುಗಿದ ಕಾರ್ಯಕ್ರಮ

ನೀತಿ ಸಂಹಿತೆ ಜಾರಿಗೆ ಮೊದಲು ಗಿಣಗೇರಾ ರೈಲ್ವೆ ಮೇಲ್ಸೇತುವೆ ಉದ್ಘಾಟಿಸಿದ ಸಂಗಣ್ಣ
Published 16 ಮಾರ್ಚ್ 2024, 16:23 IST
Last Updated 16 ಮಾರ್ಚ್ 2024, 16:23 IST
ಅಕ್ಷರ ಗಾತ್ರ

ಕೊಪ್ಪಳ: ಲೋಕಸಭಾ ಚುನಾವಣೆ ಘೋಷಣೆಗೆ ಕ್ಷಣಗಣನೆ ಶುರುವಾಗಿದ್ದ ಹೊತ್ತಿನಲ್ಲಿಯೇ ತಾಲ್ಲೂಕಿನ ಗಿಣಿಗೇರಾ ಗ್ರಾಮದಲ್ಲಿ ಶನಿವಾರ ಸಂಸದ ಸಂಗಣ್ಣ ಕರಡಿ ರೈಲ್ವೆ ಮೇಲ್ಸೆತುವೆ ಲೋಕಾರ್ಪಣೆ ಮಾಡಿದರು.

ಮಧ್ಯಾಹ್ನ 1.47ಕ್ಕೆ ಆರಂಭವಾದ ಕಾರ್ಯಕ್ರಮ ಬರೋಬ್ಬರಿ 47 ನಿಮಿಷಗಳಲ್ಲಿ ಪೂರ್ಣಗೊಂಡಿತು. ನೀತಿ ಸಂಹಿತೆ ಜಾರಿಯಾದರೆ ಕಾರ್ಯಕ್ರಮಕ್ಕೆ ಅವಕಾಶ ಸಿಗುವದಿಲ್ಲವೆನ್ನುವ ಕಾರಣಕ್ಕೆ ಸಂಸದರು ಹಾಗೂ ಅತಿಥಿಗಳು ತರಾತುರಿಯಲ್ಲಿ ಕಾರ್ಯಕ್ರಮ ನಡೆಸಿದರು.

’ಟೈಂ ಆಗುತ್ತಿದೆ ಬೇಗ ಆರಂಭಿಸಿ, ಎಲ್ಲರಿಗೂ ಭಾಷಣ ಬೇಡ, ಒಂದಿಬ್ಬರು ಮಾತನಾಡಿದರೆ ಸಾಕು; ಮುಖ್ಯವಾಗಿ ಸಂಸದರ ಮಾತನಾಡಿದರೆ ಸಾಕು’ ಎನ್ನುವ ಚರ್ಚೆಗಳು ಕೂಡ ಅಲ್ಲಿಯೇ ನಡೆದವು. ಸೇತುವೆಯು 12 ಮೀಟರ್ ಅಗಲ 900 ಮೀಟರ್‌ ಉದ್ದವಿದೆ. 

ಸಂಗಣ್ಣ ಕರಡಿ ಮಾತನಾಡಿ ‘ಬದುಕಿನ ಖುಷಿಯ ದಿನ ಇದಾಗಿದ್ದು, ನಿಮ್ಮೆಲ್ಲರ ಸೇವೆ ಮಾಡಲು ಹತ್ತು ವರ್ಷಗಳ ಕಾಲ ಅವಕಾಶ ನೀಡಿದ್ದಕ್ಕೆ ಎಲ್ಲರಿಗೂ ಧನ್ಯವಾದ ಸಲ್ಲಿಸುವೆ. ಜನಪರ ಯೋಜನೆ ಜಾರಿ ಮಾಡುವುದೇ ಪ್ರಜಾಪ್ರಭುತ್ವ. ಪ್ರಧಾನಿ ನರೇಂದ್ರ ಮೋದಿ ತಮ್ಮ ಕಾರ್ಯದ ಮೂಲಕ ಜಗತ್ತು ನಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ’ ಎಂದರು.

‘ರಾಷ್ಟ್ರೀಯ ಹೆದ್ದಾರಿ, ಅಂಚೆ ಕಚೇರಿ, ರೈಲ್ವೆ ಹೀಗೆ ಪ್ರತಿ ಕ್ಷೇತ್ರದಲ್ಲಿಯೂ ಭಾರತ ಪ್ರಗತಿಪಥದತ್ತ ಸಾಗಿದೆ. ವಿದೇಶಗಳಲ್ಲಿ ನಮ್ಮ ದೇಶದ ಬಗ್ಗೆ ಹೆಮ್ಮೆಯಿಂದ ಮಾತನಾಡುವಂತಾಗಿದೆ. ₹900 ಕೋಟಿ ವೆಚ್ಚದಲ್ಲಿ ರಾಯಚೂರು ತನಕ ನಡೆಯಲಿರುವ ರೈಲ್ವೆ ಕಾಮಗಾರಿ ಮುಂದಿನ ಎರಡೂವರೆ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ನನ್ನಿಬ್ಬರು ಮಕ್ಕಳನ್ನು ಮೆಚ್ಚಿಕೊಳ್ಳುವುದಿಲ್ಲ. ಅವರಿಗಿಂತಲೂ ನನ್ನ ಸಹಾಯಕ ರೆಡ್ಡಿಯನ್ನು ಮೆಚ್ಚಿಕೊಳ್ಳುವೆ. ಎಳ್ಳಷ್ಟು ಸ್ವಾರ್ಥವಿಲ್ಲದೆ ನನ್ನೊಂದಿಗೆ ಕೆಲಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಿಂಧನೂರಿನ ಕೇಂದ್ರಿಯ ವಿದ್ಯಾಲಯ ಮಂಜೂರು ಆಗಲಿದೆ’ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್‌ ಗುಳಗಣ್ಣನವರ, ಗಿಣಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀದೇವಿ, ಮುಖಂಡರಾದ ಕೊಟ್ರಬಸಯ್ಯ ಹಿರೇಮಠ, ಗೂಳಪ್ಪ ಹಲಗೇರಿ, ಮಂಜುನಾಥ ಪಾಟೀಲ, ಮಹಾಂತೇಶ ಸಜ್ಜನ, ವಾಗೇಶ ಹಿರೇಮಠ, ಸಣ್ಣ ಕನಕಪ್ಪ, ಗ್ಯಾನಪ್ಪ, ಮಂಜುನಾಥ ಹಂದ್ರಾಳ, ರವಿ ಹಲಗೇರಿ, ಕರಿಯಪ್ಪ ಮೇಟಿ ಸೇರಿದಂತೆ ಅನೇಕರು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT