ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವು ಕಡಿತ: ಮಹಿಳೆ ಸಾವು

Published 8 ಮೇ 2024, 16:39 IST
Last Updated 8 ಮೇ 2024, 16:39 IST
ಅಕ್ಷರ ಗಾತ್ರ

ಕಾರಟಗಿ: ಜಾನುವಾರುಗಳಿಗೆ ಹಾಕಲಾಗಿದ್ದ ಪಿಳಿಪಿಸಿರು ಮೇವಿಗೆ ನೀರು ಹರಿಸಲು ಹೋಗಿದ್ದ ಮಹಿಳೆಗೆ ಹಾವು ಕಡಿದ ಘಟನೆ ತಾಲ್ಲೂಕಿನ ಚಳ್ಳೂರಕ್ಯಾಂಪ್‌ನಲ್ಲಿ ಮಂಗಳವಾರ ಜರುಗಿದೆ.
ಕ್ಯಾಂಪ್‌ನ 3ನೇ ವಾರ್ಡ್‌ನ ವಿನಾಯಕ ನಗರದ ಪೆದ್ದಮ್ಮ ನಾಗಪ್ಪ (57) ಮೃತಪಟ್ಟವರು.
ಮನೆಯ ಹಿಂಭಾಗದಲ್ಲಿದ್ದ ಜಮೀನಿನಲ್ಲಿ ನೀರು ಬಿಡುವಾಗ ಪೆದ್ದಮ್ಮಗೆ ಹಾವು ಕಚ್ಚಿತ್ತು.

ಅಸ್ವಸ್ಥಗೊಂಡ ಅವರನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ವೈದ್ಯರ ಸಲಹೆಯ ಮೇರೆಗೆ ಗಂಗಾವತಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT