ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ | ಕಾರು ಸ್ಕೂಟರ್ ನಡುವೆ ಡಿಕ್ಕಿ: ಇಬ್ಬರು ಶಿಕ್ಷಕಿಯರ ಸಾವು

Published 7 ಜನವರಿ 2024, 14:05 IST
Last Updated 7 ಜನವರಿ 2024, 14:05 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಸಮೀಪ ಕಾರು ಮತ್ತು ಸ್ಕೂಟರ್ ನಡುವೆ ಭಾನುವಾರ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಶಿಕ್ಷಕಿಯರು ಮೃತಪಟ್ಟಿದ್ದಾರೆ.

ತಾಲ್ಲೂಕಿನ ಬಸ್ತಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ನಾಗರತ್ನ (50) ಮತ್ತು ಪಿ.ಹೊಸಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಮಂಜುಳಾ (45) ಮೃತಪಟ್ಟವರು. ನಾಗರತ್ನ ಸ್ಥಳದಲ್ಲೇ ಮೃತಪಟ್ಟಿದ್ದು, ಮಂಜುಳಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಗರತ್ನ ಮತ್ತು ಮಂಜುಳಾ ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯ ಕರ್ತವ್ಯ ಮುಗಿಸಿ ಆಕ್ಟಿವ್ ಹೋಂಡಾ ಸ್ಕೂಟರ್‌ನಲ್ಲಿ ಮೈಸೂರು ಕಡೆ ತೆರಳುತ್ತಿದ್ದರು. ಪಾಲಹಳ್ಳಿ ಕಡೆಯಿಂದ ಪಟ್ಟಣದ ಕಡೆ ಬರುತ್ತಿದ್ದ ಬ್ರೆಜ್ಜಾ ಕಾರು ಡಿಕ್ಕಿ ಹೊಡೆದಿದೆ. ಕಾರಿನ ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಸ್ತಿಪುರ ಶಾಲೆಯ ಶಿಕ್ಷಕಿ ನಾಗರತ್ನ ಮೂಲತಃ ಕೆ.ಆರ್. ನಗರದವರಾಗಿದ್ದು, ಬಸ್ತಿಪುರದಲ್ಲೇ ವಾಸವಾಗಿದ್ದರು. ಪಿ.ಹೊಸಹಳ್ಳಿ ಶಾಲೆಯ ಶಿಕ್ಷಕಿ ಮಂಜುಳಾ ಪಾಂಡವಪುರ ತಾಲ್ಲೂಕಿನ ಹಿರೀಮರಳಿ ಗ್ರಾಮದವರಾಗಿದ್ದು, ಕುಟುಂಬದ ಜತೆ ಮೈಸೂರಿನ ಮೇಟಗಹಳ್ಳಿಯಲ್ಲಿ ವಾಸವಾಗಿದ್ದರು.

ಕಾರಿನ ಚಾಲಕನನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಹ ಶಿಕ್ಷಕಿ ನಾಗರತ್ನ
ಸಹ ಶಿಕ್ಷಕಿ ನಾಗರತ್ನ
ಶಿಕ್ಷಕಿ ಮಂಜುಳಾ
ಶಿಕ್ಷಕಿ ಮಂಜುಳಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT