ಸೋಮವಾರ, ಮಾರ್ಚ್ 8, 2021
22 °C

ದರೋಡೆಗೆ ಸಂಚು: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ದರೋಡೆಗೆ ಸಂಚು ರೂಪಿಸಿದ 10 ಮಂದಿ ಆರೋಪಿಗಳನ್ನು ಕೆಆರ್‌ಎಸ್‌ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಕೆಆರ್‌ಎಸ್‌ ಸಮೀಪ ಇಲ ವಾಲ ರಸ್ತೆಯ ಡಿ’ಪಾಲ್‌ ಶಾಲೆ ಬಳಿ ಮಚ್ಚು, ಲಾಂಗು ಸಹಿತ ದರೋಡೆಗೆ ಸಂಚು ಹಾಕಿದ್ದ ಆರೋಪಿಗಳನ್ನು ಎಸ್‌ಐ ನವೀನ್‌ಗೌಡ ತಂಡ ಬಂಧಿಸಿದೆ.

ತಾಲ್ಲೂಕಿನ ಹುಲಿಕೆರೆಯ ಯಶವಂತ್‌, ಕಿಶೋರ್‌, ಆಕಾಶ್‌, ಸಚಿನ್‌, ಶಿವು, ಚಲುವರಾಜು, ನಂದೀಶ್‌ಗೌಡ, ಕೆಆರ್‌ಎಸ್‌ನ ಶಶಾಂಕ್‌, ಹೊಂಗಹಳ್ಳಿಯ ನಿಶ್ಚಿತ್, ಪಾಂಡವಪುರ ತಾಲ್ಲೂಕಿನ ಅರಳಕುಪ್ಪೆ ಗ್ರಾಮದ ಎ.ಪಿ. ಪ್ರಥಮ್‌ ಬಂಧಿತರು.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಾಹಿತಿ ಆಧರಿಸಿ ದಾಳಿ ನಡೆಸಿ ಆರೋ ಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ದರೋಡೆ ಸಂಚು ರೂಪಿಸುತ್ತಿದ್ದ ಸಂಗತಿ ಒಪ್ಪಿಕೊಂಡಿದ್ದಾರೆ ಎಂದು ಎಸ್‌ಐ ನವೀನ್‌ಗೌಡ ತಿಳಿಸಿದ್ದಾರೆ.

ಬಂಧಿತರಿಂದ ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಕೆಆರ್‌ಎಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.