ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಂಡೆ ಹೊಸಹಳ್ಳಿಯಲ್ಲಿ ಕೆ. ಶಿವರಾಂ ಪುಣ್ಯ ಸ್ಮರಣೆ

Published 11 ಮಾರ್ಚ್ 2024, 6:02 IST
Last Updated 11 ಮಾರ್ಚ್ 2024, 6:02 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಗೆಂಡೆ ಹೊಸಹಳ್ಳಿ ಗ್ರಾಮದಲ್ಲಿ ಭಾನುವಾರ ನಿವೃತ್ತ ಐಎಎಸ್‌ ಅಧಿಕಾರಿ ದಿವಂಗತ ಕೆ. ಶಿವರಾಂ ಅವರ ಪುಣ್ಯ ಸ್ಮರಣೆ ನಡೆಯಿತು.

ಗ್ರಾಮದ ಅರಳಿ ಕಟ್ಟೆ ಸಮೀಪ ಕೆ. ಶಿವರಾಂ ಅವರ ಭಾವಚಿತ್ರವನ್ನು ಇಟ್ಟು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಶಿಕ್ಷಕ ಪ್ರತಾಪ್‌ ಕೆ. ಶಿವರಾಂ ಅವರ ಸೇವೆಯನ್ನು ಸ್ಮರಿಸಿದರು. ಕನ್ನಡದಲ್ಲಿ ಐಎಎಸ್‌ ಪರೀಕ್ಷೆ ಪಾಸು ಮಾಡಿ, ವಿವಿಧ ಇಲಾಖೆಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಹೆಸರು ಮಾಡಿದ್ದಾರೆ ಎಂದು ಬಣ್ಣಿಸಿದರು.

ಪುಣ್ಯ ಸ್ಮರಣೆ ನಿಮಿತ್ತ ನೆರೆದಿದ್ದವರಿಗೆ ಸಿಹಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಮಲ್ಲೇಶ್‌, ಶಿವಕುಮಾರ್‌, ಬನ್ನೂರು ನಾಗರಾಜು, ಗೋವರ್ಧನ್‌, ಹರ್ಷ, ಪ್ರವೀಣ್‌, ಗೋವಿಂದರಾಜು, ನವೀನ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT