ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕವಾಡಿ | ಅಕ್ರಮ ಗಾಂಜಾ; ಐವರ ಬಂಧನ

Published 13 ಮಾರ್ಚ್ 2024, 15:33 IST
Last Updated 13 ಮಾರ್ಚ್ 2024, 15:33 IST
ಅಕ್ಷರ ಗಾತ್ರ

ಬೆಳಕವಾಡಿ: ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ಐದು ಮಂದಿಯನ್ನು ಹಲಗೂರು ಸಿಪಿಐ ಬಿ.ಎಸ್.ಶ್ರೀಧರ್ ನೇತೃತ್ವದಲ್ಲಿ ಬೆಳಕವಾಡಿ ಪೊಲೀಸರು ಬಂಧಿಸಿದ್ದಾರೆ.

ಕೊಳ್ಳೇಗಾಲದ ಫಯಾಜ್, ವರುಣ್ ಕುಮಾರ್, ಮಳವಳ್ಳಿ ಪಟ್ಟಣದ ಕೋಟೆ ಬೀದಿಯ ಅರುಣ್, ಮುಸ್ಲಿಂ ಬ್ಲಾಕ್ ನ ಅರ್ಬಜ್ ಪಾಷಾ, ಬಿಜಿಪುರದ ಶ್ರೀಕಾಂತ್ ಬಂಧಿತರು.

ಭಾನುವಾರ ಫಯಾಜ್, ವರುಣ್ ಕುಮಾರ್ ಬೈಕ್‌ನಲ್ಲಿ ಮಳವಳ್ಳಿ ಕಡೆಗೆ ಗಾಂಜಾ ಸಾಗಿಸುತ್ತಿದ್ದರು. ಇದೇ ವೇಳೆ ಗಾಂಜಾ ಖರೀದಿಸಲು ಮಳವಳ್ಳಿಯಿಂದ ಬಂದಿದ್ದ ಅರುಣ್, ಅರ್ಬಜ್ ಪಾಷಾ, ಶ್ರೀಕಾಂತ್‌ನನ್ನು ಡಿವೈಎಸ್ಪಿ ವಿ.ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 1.5 ಕೆ.ಜಿ. ಗಾಂಜಾ ವಶ ಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಪಿಐ ಬಿ.ಎಸ್.ಶ್ರೀಧರ್, ಪಿಎಸ್ಐ ವಿ.ಸಿ.ಅಶೋಕ್, ಸಿಬ್ಬಂದಿಗಳಾದ ನಾಗೇಂದ್ರ, ನಿಂಗರಾಜು, ಅವಿನಾಶ್, ಮಹೇಶ್ ಇದ್ದರು.

ಈ ಸಂಬಂಧ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT