ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮನೆಯಲ್ಲಿ ಲಿಂಗ ಪೂಜೆ ಮಾಡೋಣ

ನಿಜಗುಣಾನಂದಪ್ರಭು ಸ್ವಾಮೀಜಿ ಅಭಿಮತ
Last Updated 27 ಜುಲೈ 2018, 11:21 IST
ಅಕ್ಷರ ಗಾತ್ರ

ಮಂಡ್ಯ: ‘ರೈತನಿಲ್ಲದೆ ದೇಶ ಸುಭದ್ರವಾಗಿ ಇರಲು ಸಾಧ್ಯವಿಲ್ಲ. ಆತನ ಉದ್ಧಾರವೇ ದೇಶದ ಉದ್ಧಾರ. ಅನ್ನದಾತ ದೇವರಿದ್ದ ಹಾಗೆ. ರೈತನ ಮನೆಯಲ್ಲಿ ಲಿಂಗಪೂಜೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ಮಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದಪ್ರಭು ಸ್ವಾಮೀಜಿ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನಗರದ ಕಲಾಮಂದಿರದಲ್ಲಿ ಶುಕ್ರವಾರ ನಡೆದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ನಾನು ಎಂದಿಗೂ ರೈತರ ವಿರೋಧಿಯಲ್ಲ, ರೈತರ ಪರವಾಗಿದ್ದೇನೆ. ರೈತರು ವ್ಯಸನಿಗಳಾಗಬಾರದು, ಅಂತಹ ರೈತರ ಸಾಲ ಮನ್ನಾ ಮಾಡಬಾರದು ಎಂಬ ಅರ್ಥದಲ್ಲಿ ನಾನು ಮಾತನಾಡಿದ್ದೆ. ಆದರೆ ಅದು ತೀವ್ರ ಚರ್ಚೆಗೆ ಕಾರಣವಾಗಿತ್ತು. ದೇಶಕ್ಕೆ ಅನ್ನ ಹಾಕುವ ರೈತನ ವಿರುದ್ಧವಾಗಿ ನಾನು ಎಂದಿಗೂ ಮಾತನಾಡಿಲ್ಲ. ದೇಶದ ಬೆನ್ನೆಲುಬಾಗಿರುವ ರೈತರು ನೆಮ್ಮದಿಯಾಗಿದ್ದರೆ ದೇಶ ಚೆನ್ನಾಗಿರುತ್ತದೆ. ಬಸವಣ್ಣ ಕೂಡ ರೈತರನ್ನು ದೇವರೆಂದೇ ಭಾವಿಸಿದ್ದರು, ರೈತರ ಮನೆಯಲ್ಲಿ ಲಿಂಗಪೂಜೆ ಮಾಡೋಣ ಎಂದು ಕರೆ ಕೊಟ್ಟಿದ್ದರು. ಅದೇ ಹಾದಿಯಲ್ಲಿ ನಾವು ನಡೆಯಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT