ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಕೃತಕ ಅಂಗಾಂಗ ವಿತರಣೆ ಕಾರ್ಯಕ್ರಮ ನಾಳೆ

Published 25 ನವೆಂಬರ್ 2023, 15:24 IST
Last Updated 25 ನವೆಂಬರ್ 2023, 15:24 IST
ಅಕ್ಷರ ಗಾತ್ರ

ಮಂಡ್ಯ: ‘ಜೈನ ಸಮಾಜ, ನಾರಾಯಣ ಸೇವಾ ಸಂಸ್ಥಾನದ ವತಿಯಿಂದ ನ.26ರಂದು ಬೆಳಿಗ್ಗೆ 10 ಗಂಟೆಗೆ ಮಾಡ್ಯುಲರ್ ಕೃತಕ ಅಂಗಾಂಗ ಮತ್ತು ಕ್ಯಾಲಿಪರ್ಸ್‌ ವಿತರಣಾ ಸಮಾರಂಭವು ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ’ ಎಂದು ವಕೀಲ ಎಂ.ಕೆ.ಜೈನ್ ಹೇಳಿದರು.

‘ಶಾಸಕ ಗಣಿಗ ರವಿಕುಮಾರ್ ಉದ್ಘಾಟಿಸುವರು. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಅಧ್ಯಕ್ಷತೆ ವಹಿಸುವರು. ಕಾಂಗ್ರೆಸ್‌ ಮುಖಂಡ ಎಂ.ಎಸ್.ಆತ್ಮಾನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಡಿಎಚ್ಒ ಡಾ.ಕೆ.ಮೋಹನ್ ಭಾಗವಹಿಸುವರು’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅಂಗವಿಕಲರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಲಕರಣೆ ನೀಡಲಾಗುತ್ತಿದೆ. ವಿವಿಧ ಸಂಘ ಸಂಸ್ಥೆಗಳಿಂದ ಮಾಹಿತಿ ಪಡೆದು ಅರ್ಹ 150 ಜನರಿಗೆ ವಿತರಣೆ ಮಾಡಲಾಗುತ್ತಿದೆ’ ಎಂದರು.

ಸುಮತಿನಾಥ ಜೈನ ಮಂದಿರ ಅಧ್ಯಕ್ಷ ಸಜ್ಜನ್‌ ರಾಜ್‌ಜಿ ಬನ್ಸಾಲಿ, ತೇರಾಪಂಥ್ ಸಭಾದ ಅಧ್ಯಕ್ಷ ನರೇಂದ್ರಕುಮಾರ್ ದತ್, ಸ್ಥಾನಕವಾಸಿ ಜೈನ್ ಸಮಾಜದ ಅಧ್ಯಕ್ಷ ಅಮರ್‌ಚಂದ ಡಾಗಾ, ಆಯೋಜಕರಾದ ಡಾ.ಉತ್ತಮ್‌ಚಂದ್, ಕಮಲೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT