ಮಂಡ್ಯ ನಗರಸಭೆ: 181 ನಾಮಪತ್ರ ಸಲ್ಲಿಕೆ

7

ಮಂಡ್ಯ ನಗರಸಭೆ: 181 ನಾಮಪತ್ರ ಸಲ್ಲಿಕೆ

Published:
Updated:

ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆ ನಾಮಪತ್ರ ಸಲ್ಲಿಸುವ ಪಕ್ರಿಯೆ ಶನಿವಾರ ಪೂರ್ಣಗೊಂಡಿದ್ದು ನಗರಸಭೆಯ ಒಟ್ಟು 35 ವಾರ್ಡ್‌ಗಳಿಂದ 181 ನಾಮಪತ್ರಗಳು ಸಲ್ಲಿಕೆಯಾಗಿವೆ. ಶನಿವಾರ ಒಂದೇ ದಿನ 160 ನಾಮಪತ್ರ ಸಲ್ಲಿಕೆಯಾಗಿವೆ.

ನಗರಸಭೆಗೆ ಅಂತಿಮ ದಿನವೇ ಅತೀ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿವೆ. ಆ.13ರಂದು 2 ನಾಮಪತ್ರ, ಆ.16ರಂದು 19, ಶನಿವಾರ 160 ಸೇರಿ ಒಟ್ಟು 181 ನಾಮಪತ್ರ ಸಲ್ಲಿಕೆಯಾಗಿವೆ.

ತಾಲ್ಲೂಕು ಪಂಚಾಯಿತಿ, ತೋಟಗಾರಿಕೆ ಇಲಾಖೆಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಿತು. ಆ.20ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಆಗಸ್ಟ್ 23 ಕೊನೆಯ ದಿನ. ಶನಿವಾರ ಕೊನೆಯ ದಿನವಾಗಿದ್ದರಿಂದ ನಾಮಪತ್ರ ಸ್ವೀಕರಿಸುವ ಸ್ಥಳಗಳಲ್ಲಿ ಹೆಚ್ಚು ದಟ್ಟಣೆ ಕಂಡು ಬಂತು. ಮಧ್ಯಾಹ್ನ 3 ಗಂಟೆ ಒಳಗಾಗಿ ಬಂದು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೂ ಮೊದಲು ಬೆಂಬಲಿಗರೊಂದಿಗೆ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಆಗಸ್ಟ್‌ 10ರಿಂದ ಶನಿವಾರದವರೆಗೆ ಮಂಡ್ಯ ನಗರಸಭೆಗೆ 166 ನಾಮಪತ್ರಗಳು ಸಲ್ಲಿಕೆಯಾಗಿವೆ. ಮದ್ದೂರು ಪುರಸಭೆಯ 26 ವಾರ್ಡ್‌ಗಳಿಗೆ 91, ಪಾಂಡವಪುರ ಪುರಸಭೆಯ 23 ವಾರ್ಡ್‌ಗಳಿಗೆ 105, ನಾಗಮಂಗಲ ಪುರಸಭೆಯ 23 ವಾರ್ಡ್‌ಗಳಿಗೆ 90, ಬೆಳ್ಳೂರು ಪಟ್ಟಣ ಪಂಚಾಯಿತಿಯ 13 ವಾರ್ಡ್‌ಗಳಿಗೆ 55 ನಾಮಪತ್ರ ಸಲ್ಲಿಕೆಯಾಗಿವೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !