ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀರಂಗಪಟ್ಟಣ | ಭಾರಿ ಮಳೆ: ಹೆದ್ದಾರಿ ಜಲಾವೃತ

Published 14 ಮೇ 2024, 15:46 IST
Last Updated 14 ಮೇ 2024, 15:46 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣ ಮತ್ತು ಆಸುಪಾಸಿನಲ್ಲಿ ಮಂಗಳವಾರ ಮುಂಜಾನೆ ಧಾರಾಕಾರ ಮಳೆ ಸುರಿಯಿತು.

ಮುಂಜಾನೆ 3 ಗಂಟೆಯಿಂದ 5.30ರ ವರೆಗೆ ನಿರಂತರವಾಗಿ ಮಳೆ ಸುರಿದ ಪರಿಣಾಮ ಪಟ್ಟಣದ ಚೆಕ್‌ಪೋಸ್ಟ್ ಬಳಿ ರಾಜ್ಯ ಹೆದ್ದಾರಿ ಜಲಾವೃತವಾಯಿತು. ಹೆದ್ದಾರಿ ಅಕ್ಷರಶಃ ಕೆರೆಯಂತಾಗಿದ್ದು, ಮಂಡಿಯುದ್ದ ನೀರು ನಿಂತಿತ್ತು. ನೀರಿನಲ್ಲೇ ವಾಹನಗಳು ಸಂಚರಿಸಿದವು. ದ್ವಿಚಕ್ರ ವಾಹನಗಳ ಸವಾರರು ಪಕ್ಕದ ರಸ್ತೆಯಲ್ಲಿ ಸಂಚರಿಸಿದವು. ಹೆದ್ದಾರಿಗೆ ಹೊಂದಿಕೊಂಡಿರುವ ಬಾಬು ಜಗಜೀವನರಾಂ ಭವನದ ಬಳಿಯ ಎಂ.ಕೆ. ರೂಮ್ಸ್‌ ಹೆಸರಿನ ರೆಸಾರ್ಟ್‌ ಒಳಗೆ ಎರಡು ಅಡಿಗಳಷ್ಟು ನೀರು ನಿಂತಿತ್ತು.

ನೀರು ಹರಿದು ಹೋಗುವ ಕೊಳವೆ ಕಟ್ಟಿಕೊಂಡಿದ್ದರಿಂದ ಹೆದ್ದಾರಿಯಲ್ಲಿ ನೀರು ನಿಂತಿತ್ತು. ನೀರನ್ನು ಖಾಲಿ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಎಂ. ರಾಜಣ್ಣ ತಿಳಿಸಿದರು.

ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಹಳ್ಳ ಕೊಳ್ಳಗಳಲ್ಲಿ ನೀರು ಹರಿದಿದೆ. ಹಳ್ಳಗಳು ಮತ್ತು ಕೃಷಿ ಭೂಮಿಯಿಂದ ಕಾವೇರಿ ನದಿಗೆ ನೀರು ಹರಿದು ಬಂದಿದ್ದು, ನದಿಯ ನೀರು ಕೆಂಬಣ್ಣಕ್ಕೆ ತಿರುಗಿತ್ತು. ಪಟ್ಟಣದ ಬೂದಿಗುಂಡಿ ಬಡಾವಣೆಯಲ್ಲಿ ತಗ್ಗು ಪ್ರದೇಶದ ಕೆಲವು ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT