ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಮಂಗಲ ಪಟ್ಟಣ ವ್ಯಾಪ್ತಿಯ ವಿವಿಧೆಡೆ ವರ್ಷಧಾರೆ

Published 19 ಮೇ 2024, 13:52 IST
Last Updated 19 ಮೇ 2024, 13:52 IST
ಅಕ್ಷರ ಗಾತ್ರ

ನಾಗಮಂಗಲ: ಪಟ್ಟಣ ವ್ಯಾಪ್ತಿ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಭಾನುವಾರ ಮಧ್ಯಾಹ್ನ ಜೋರು ಮಳೆ ಸುರಿಯಿತು.

ಪಟ್ಟಣದ ವ್ಯಾಪ್ತಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾದ ಸೋನೆ ಮಳೆಯು ನಂತರ ತೀವ್ರತೆ ಪಡೆದುಕೊಂಡು ಸುಮಾರು ಒಂದು ಗಂಟೆಗೂ ಅಧಿಕ ಸಮಯ ಸುರಿಯತು. ಕೆಲ ಕಾಲ ಬಿಟ್ಟುಬಿಟ್ಟು ವರ್ಷಧಾರೆ ಸುರಿಯಿತು. ಪಟ್ಟಣ ವ್ಯಾಪ್ತಿಯೂ ಸೇರಿದಂತೆ ಬಳಪದಮಂಟಿಕೊಪ್ಪಲು, ಪಾಲಾಗ್ರಹಾರ, ಹೊಸಹಳ್ಳಿ, ಚಿಕ್ಕವೀರನ ಕೊಪ್ಪಲು, ನಲ್ಕುಂದಿ, ಕೋಟೆಬೆಟ್ಟ, ಮೈಲಾರಪಟ್ಟಣ, ಬ್ರಹ್ಮದೇವರಹಳ್ಳಿ, ಮಾಯಗೋನಹಳ್ಳಿ, ತುಪ್ಪದಮಡು, ಮುಳಕಟ್ಟೆ, ತೊಳಲಿ, ಕೆ.ಮಲ್ಲೇನಹಳ್ಳಿ, ಗೊಲ್ಲರ ಕೊಪ್ಪಲು, ಬ್ಯಾಡರಹಳ್ಳಿ, ದೊಂದೇಮಾದಳ್ಳಿ, ಬೀರೇಶ್ವರಪುರ, ಪಡುವಲ ಪಟ್ಟಣ, ಬೆಟ್ಟದ ಮಲ್ಲೇನಹಳ್ಳಿ, ಹಾಲ್ತಿ, ಕರಡಹಳ್ಳಿ, ಹೊಸಕೊಪ್ಪಲು, ಬಳಪದಮಂಟಿ ಕೊಪ್ಪಲು ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಮಳೆಯಾಯಿತು.

ತಾಲ್ಲೂಕಿನ ದೇವಲಾಪುರ, ಕಸಬಾ, ಹೊಣಕೆರೆ, ಬಿಂಡಿಗನವಿಲೆ ಹೋಬಳಿ ಸೇರಿದಂತೆ ಬೆಳ್ಳೂರು ಹೋಬಳಿಯ ವಿವಿಧ ಭಾಗಗಳಲ್ಲಿ ಜೋರು ಮಳೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT