ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಹಳ್ಳಕ್ಕೆ ಕುಸಿದ ಶಾಲಾ ಬಸ್‌; ತಪ್ಪಿದ ದುರಂತ

Published 11 ಜನವರಿ 2024, 15:34 IST
Last Updated 11 ಜನವರಿ 2024, 15:34 IST
ಅಕ್ಷರ ಗಾತ್ರ

ಮಂಡ್ಯ: ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ಗುರುವಾರ ಖಾಸಗಿ ಶಾಲೆಯ ಬಸ್ಸೊಂದು ಹಳ್ಳಕ್ಕೆ ಕುಸಿದು ನಿಂತ ಕಾರಣ ಶಾಲಾಮಕ್ಕಳು ಭಯಪೀಡಿತರಾದರು, ಅದೃಷ್ಟವಶಾತ್‌ ಮಕ್ಕಳು ಪ್ರಾಣಾಪಾಯದಿಂದ ಪಾರಾದರು.

ಕಾವೇರಿ ಪಬ್ಲಿಕ್‌ ಶಾಲೆಯ ಬಸ್‌ ಬೆಳಿಗ್ಗೆ ಶ್ರೀರಂಗಪಟ್ಟಣದಿಂದ ಸಾಗುವಾಗ ರಾಗಿಮುದ್ದನಹಳ್ಳಿ ಗ್ರಾಮದ ಬಳಿ ದೊಡ್ಡ ಹಳ್ಳದಲ್ಲಿ ಪೈಪ್‌ ಹಾಕಿ ಮಣ್ಣಿನಿಂದ ಮುಚ್ಚಿದ್ದು ಬಸ್‌ ಸಂಚರಿಸಿದಾಗ ಪೈಪ್‌ ಪಕ್ಕದಲ್ಲಿದ್ದ ಚಪ್ಪಡಿ ಕಲ್ಲು ಸಮೇತ ಬಸ್‌ ಹಿಂಬದಿ ಚಕ್ರ ಸಿಲುಕಿ ಬಸ್‌ ವಾಲಿಕೊಂಡಿತು. ಭಯಗೊಂಡ ಮಕ್ಕಳು ಚೀರಾಡಿದರು. ಚಾಲಕ ಕೃಷ್ಣ ಅವರ ಸಮಯ ಪ್ರಜ್ಞೆಯಿಂದ ಬಸ್‌ ನಿಲ್ಲಿಸಿ ಶಿಕ್ಷಕರು, ಶಾಲಾ ಸಿಬ್ಬಂದಿ ಮಕ್ಕಳನ್ನು ಕ್ಷೇಮವಾಗಿ ಇಳಿಸಿಕೊಂಡಿದ್ದಾರೆ.

ಗ್ರಾಮಸ್ಥರ ಆಗ್ರಹ: ಗ್ರಾಮದಲ್ಲಿರುವ ಹಳ್ಳದ ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಹಿಂದಿನಿಂದಲೂ ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಹಳ್ಳಿಗಳ ಪ್ರಮುಖ ರಸ್ತೆಗಳಲ್ಲಿನ ಹಳ್ಳದ ನಡುವೆ  ಸೇತುವೆ ನಿರ್ಮಿಸಿಕೊಟ್ಟರೆ ಇಂತಹ ಅವಘಡಗಳು ಸಂಭವಿಸುವುದಿಲ್ಲ. ಕೂಡಲೇ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಬೇಕು’ ಎಂದು ಗ್ರಾಮದ ಯೋಗ, ಕುಮಾರ್, ವಿನಯ್‌ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT