ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಕರ್ನಾಟಕ–50, ‘ಪುಟ್ಟರಾಜು–60’ ಸಂಭ್ರಮ ನಾಳೆ

Published 28 ನವೆಂಬರ್ 2023, 19:49 IST
Last Updated 28 ನವೆಂಬರ್ 2023, 19:49 IST
ಅಕ್ಷರ ಗಾತ್ರ

ಪಾಂಡವಪುರ: ‘ಜೆಡಿಎಸ್ ಕಾರ್ಯಕರ್ತರು, ಮಾಜಿ ಶಾಸಕ ಸಿ.ಎಸ್. ಪುಟ್ಟರಾಜು ಅಭಿಮಾನಿಗಳು ಹಾಗೂ ಕನ್ನಡಾಭಿಮಾನಿಗಳು ಒಗ್ಗೂಡಿ ನ. 30ರಂದು ‘ಸುವರ್ಣ ಕರ್ನಾಟಕ–50 ಹಾಗೂ ಸಿ.ಎಸ್. ಪುಟ್ಟರಾಜು– 60ರ ಸಂಭ್ರಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎ.ಮಲ್ಲೇಶ್ ತಿಳಿಸಿದರು.

‘ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಸಂಜೆ 5ಗಂಟೆಗೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ತಂಡದಿಂದ ‘ಸಂಗೀತ ರಸ ಸಂಜೆ’ ಹಾಗೂ ‘ಡ್ರಾಮಾ ಜೂನಿಯರ್ಸ್ ಮಕ್ಕಳ ಕಾರ್ಯಕ್ರಮ’ ನಡೆಯಲಿದೆ. ಇದಕ್ಕೂ ಮುನ್ನ ಬೆಳಿಗ್ಗೆ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ‘ನೇತ್ರದಾನ ನೋಂದಣಿ ಹಾಗೂ ರಕ್ತದಾನ’ ಶಿಬಿರ ಏರ್ಪಡಿಸಲಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಜೆಡಿಎಸ್ ಮುಖಂಡರಾದ ಪಿ.ಎಸ್.ಲಿಂಗರಾಜು, ಎಚ್.ಎಲ್.ನಂಜೇಗೌಡ, ಮಾಣಿಕ್ಯನಹಳ್ಳಿ ಅಶೋಕ, ಪುರಸಭೆ ಸದಸ್ಯರಾದ ಶಿವಕುಮಾರ್, ಚಂದ್ರು, ಆರ್.ಸೋಮಶೇಖರ್, ಶಿವಣ್ಣ, ಎಂ.ಗಿರೀಶ್, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ನಿರ್ದೇಶಕರಾದ ರಾಮಕೃಷ್ಣೇಗೌಡ, ಕಣಿವೆ ಯೋಗೇಶ್, ವಿ.ನಿಂಗೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶ್ಯಾದನಹಳ್ಳಿ ಚಲುವರಾಜು, ಗುರುಸ್ವಮಿ, ಮುಖಂಡರಾದ ಟೌನ್ ಚಂದ್ರು, ಅಶ್ವಥ್‌ಕುಮಾರೇಗೌಡ, ಸಗಾಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT