ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೂಳೆಕೆರೆಯಿಂದ ನಾಲೆಗೆ ನೀರು ಬಿಡುಗಡೆಗೊಳಿಸಲು ಆಗ್ರಹ

Published 13 ಜೂನ್ 2024, 14:37 IST
Last Updated 13 ಜೂನ್ 2024, 14:37 IST
ಅಕ್ಷರ ಗಾತ್ರ

ಭಾರತೀನಗರ: ಸೂಳೆಕೆರೆ ನಾಲೆಯಿಂದ ಉತ್ತರ ಮತ್ತು ದಕ್ಷಿಣ ನಾಲೆಗಳಿಗೆ ನೀರು ಹರಿರಿಸಿ ರೈತರ ಕೃಷಿಗೆ ಅನುಕೂಲ ಕಲ್ಪಿಸಬೇಕೆಂದು ‘ಭಾರತೀನಗರ ಸೂಳೆಕೆರೆ ಹಿತರಕ್ಷಣ ಸಮಿತಿ’ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ ಆಗ್ರಹಿಸಿದ್ದಾರೆ.

ರೈತರು ಈಗಾಗಲೇ ಬರಗಾಲದಿಂದ ತತ್ತರಿಸಹೋಗಿದ್ದು, ನೀರಿನ ಸೌಲಭ್ಯವಿಲ್ಲದೆ, ಮಳೆಯ ಕೊರತೆಯಿಂದಾಗಿ ಹಿಂಗಾರು ಬೆಳೆಯಲ್ಲೂ ನಷ್ಟದಿಂದ ಕಂಗಾಲಾಗಿದ್ದಾರೆ. ಮುಂಗಾರು ಮಳೆ ಅಲ್ಪ ಪ್ರಮಾಣದಲ್ಲಿ ಆಗುತ್ತಿದ್ದು , ಭತ್ತದ ಸಸಿ ಮಡಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕಾವೇರಿ ನೀರಾವರಿ ನಿಗಮವು ಸೂಳೆಕೆರೆಗೆ ನೀರು ತುಂಬಿಸಲು ಆಸಕ್ತಿಹೊಂದಿಲ್ಲ.  ಕೆರೆಗೆ ಬರಬೇಕಿದ್ದ ನೀರನ್ನು ಹೆಬ್ಬಳ್ಳ ಚೆನ್ನಯ್ಯ ನಾಲೆಗೆ ತಿರುಗಿಸಿ(ಪಿಕಪ್‌) , ಕೆರೆಯ ನಾಲಾ ಅಚ್ಚುಕಟ್ಟು ರೈತರಿಗೆ ಅನ್ಯಾಯವೆಸಗಿದ್ದಾರೆ. ನಾಲಾ ಭಾಗದಲ್ಲಿ ದನ,ಕರುಗಳು, ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿಗೆ ತತ್ವಾರ ಬಂದೊದಗಿದೆ.  ಕೂಡಲೇ ಸೂಳೆಕೆರೆ ವ್ಯಾಪ್ತಿಯ ಎರಡೂ ನಾಲೆಗಳಿಗೂ ನೀರು ಹರಿಯಬಿಡಬೇಕು’ ಎಂದು ಒತ್ತಾಯಿಸಿದ್ದಾರೆ.

ಬೆಳೆ ಪರಿಹಾರಕ್ಕೆ ಒತ್ತಾಯ: ಸರ್ಕಾರ ಬೆಳೆ ಪರಿಹಾರದ ಹಣವನ್ನು ಬಿಡುಗಡೆಗೊಳಿಸಿದ್ದು , ಕೃಷಿ ಇಲಾಖಾಧಿಕಾರಿಗಳು ಬರಗಾಲದಿಂದ ಬೆಳೆ ಕಳೆದುಕೊಂಡಿರುವ ರೈತರಿಗೆ ಕೂಡಲೇ ಮೊತ್ತವನ್ನು ಬಿಡುಗಡೆಗೊಳಿಸಬೇಕು. ಬೆಳೆ ಪರಿಹಾರದಿಂದ ಬರುವ ಹಣದಿಂದ ರೈತರು ಬಿತ್ತನೆ ಬೀಜ, ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುತ್ತದೆ ಎಂದು ಶಿವಲಿಂಗೇಗೌಡ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT