ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ನದಿಯಲ್ಲಿ ಮುಳುಗಿ ಯುವಕ ಸಾವು

Published 29 ಫೆಬ್ರುವರಿ 2024, 15:30 IST
Last Updated 29 ಫೆಬ್ರುವರಿ 2024, 15:30 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಬಲಮುರಿ ಬಳಿ ಕಾವೇರಿ ನದಿಯಲ್ಲಿ ಬೆಂಗಳೂರಿನ ಯುವಕನೊಬ್ಬ ಬುಧವಾರ ಸಂಜೆ ಮುಳುಗಿ ಮತಪಟ್ಟಿದ್ದು, ಗುರುವಾರ ಬೆಳಿಗ್ಗೆ ಶವ ಪತ್ತೆಯಾಗಿದೆ.

ಬೆಂಗಳೂರಿನ ಬನ್ನೇರುಘಟ್ಟದ ವಿನಯ್‌ (22) ಮೃತಪಟ್ಟಿದ್ದಾರೆ. ಸ್ನೇಹಿತರ ಜತೆ ಬಲಮುರಿ ಪ್ರಕೃತಿ ತಾಣಕ್ಕೆ ಪ್ರವಾಸಕ್ಕೆ ಬಂದಿದ್ದ ವಿನಯ್‌ ಈಜಲು ನದಿಗೆ ಇಳಿದಾಗ ಸುಳಿಗೆ ಸಿಕ್ಕಿ ಜಲ ಸಮಾಧಿಯಾಗಿದ್ದರು, ಈಜುಗಾರರ ನೆರವಿನಿಂದ ಪೊಲೀಸರು ಗುರುವಾರ ಬೆಳಿಗ್ಗೆ ನದಿಯಿಂದ ಶವವನ್ನು ಮೇಲೆ ತೆಗೆದು ಪಂಚನಾಮೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಿದರು. ಕೆಆರ್‌ಎಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT