ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಹೂವಿನ ದರ, ಚೇತರಿಕೆ ಕಾಣದ ತರಕಾರಿಗಳು

ಮಧ್ಯಮವರ್ಗದವರ ಕೈಗೆಟುಕುವಂತಾದ ಸೇಬು
Last Updated 16 ಸೆಪ್ಟೆಂಬರ್ 2019, 20:25 IST
ಅಕ್ಷರ ಗಾತ್ರ

ಮೈಸೂರು: ಈ ವಾರದಲ್ಲಿ ಬಹುತೇಕ ಎಲ್ಲ ಹೂವಿನ ದರಗಳು ಕುಸಿತ ಕಂಡಿವೆ. ಮಲ್ಲಿಗೆ, ಸೇವಂತಿಗೆ, ಕಾಕಡ ದರಗಳು ಚೇತರಿಕೆ ಕಂಡಿಲ್ಲ.

ಸೇವಂತಿಕೆ ಹೂ ಒಂದು ಮಾರಿಗೆ ₹ 10ಕ್ಕೆ ಇಳಿದಿರುವುದು ಬೆಳೆಗಾರರಿಗೆ ನಷ್ಟ ತರಿಸುತ್ತಿದೆ. ಒಳ್ಳೆಯ ಮಳೆ ಬಿದ್ದಿದ್ದರಿಂದ ಹೂವಿನ ಆವಕ ಹೆಚ್ಚಾಗಿದೆ. ಇದರಿಂದ ಹೂ ಬೆಳೆದವರು ಸಿಕ್ಕಿದ ದರಕ್ಕೆ ಮಾರಾಟ ಮಾಡುವಂತಹ ಸ್ಥಿತಿಗೆ ತಲುಪಿದ್ದಾರೆ.

ತರಕಾರಿಗಳಿಗೂ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಟೊಮೆಟೊ ಕೆ.ಜಿಗೆ ₹ 4ರಿಂದ 6ಕ್ಕೆ ಅಲ್ಪ ಏರಿಕೆ ಕಂಡಿದೆ. ₹ 26ರಲ್ಲಿದ್ದ ಬದನೆ ಬೆಲೆ ₹ 17ಕ್ಕೆ ಕಡಿಮೆಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಬದನೆ ಮಾರುಕಟ್ಟೆಗೆ ಬರುತ್ತಿರುವುದರಿಂದ ದರ ಇನ್ನಷ್ಟು ಕುಸಿಯುವ ಭೀತಿ ಮೂಡಿದೆ.‌

ಕೆ.ಜಿಗೆ ಸಗಟು ಧಾರಣೆ ₹ 25ರಲ್ಲಿದ್ದ ಹಸಿಮೆಣಸಿನಕಾಯಿ ದರವು ಈ ವಾರ ₹ 18ಕ್ಕೆ ಕಡಿಮೆಯಾಗಿದೆ. ದಪ್ಪಮೆಣಸಿನಕಾಯಿ ದರ ₹ 25ಕ್ಕೆ ಕಡಿಮೆಯಾಗಿದೆ.

ಸೇಬಿನ ಆವಕವೂ ಈ ವಾರ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ. ಇದರಿಂದ ದರ ಕಡಿಮೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಇದರ ದರ ಕೆ.ಜಿಗೆ ₹ 100 ಇದೆ. ಆದರೆ, ನಗರದ ಅಲ್ಲಲ್ಲಿ ತಳ್ಳುವ ಗಾಡಿಗಳಲ್ಲಿ ಕೆ.ಜಿಗೆ ₹ 60ರಿಂದ ₹ 80ಕ್ಕೆ ಮಾರಾಟ ಮಾಡಲಾಗುತ್ತಿದೆ. ಕಳೆದೆರಡು ವಾರಗಳ ಹಿಂದೆ ಇದರ ದರ ಕೆ.ಜಿಗೆ ₹ 180 ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT