ಹಸು ಕಳವಿಗೆ ಯತ್ನ: ಬಂಧನ

7
ಠಾಣೆ ಆವರಣದಲ್ಲೇ ಹಾಲು ಕರೆದ ಮಾಲೀಕರು

ಹಸು ಕಳವಿಗೆ ಯತ್ನ: ಬಂಧನ

Published:
Updated:
Deccan Herald

ಪಿರಿಯಾಪಟ್ಟಣ: ಹಸು ಮತ್ತು ಕರುಗಳನ್ನು ಕಳವು ಮಾಡಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ತಡರಾತ್ರಿ  ಬಂಧಿಸಿ 4 ಹಸು ಮತ್ತು 2 ಕರು ವಶಪಡಿಸಿಕೊಂಡಿದ್ದಾರೆ.

ವಿರಾಜಪೇಟೆ ಪಟ್ಟಣದ ದೊಡ್ಡಚೌಕಿ ನಿವಾಸಿ ಟಿ.ಕೆ.ಸಲೀಂ ಬಂಧಿತ ಆರೋಪಿ.

ಈತ ರಾತ್ರಿ 2.30ರ ಸುಮಾರಿಗೆ ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಈದ್ಗಾ ಮೈದಾನದ ಬಳಿ ಹಸುಗಳನ್ನು ಗೋಣಿಕೊಪ್ಪ ಕಡೆಗೆ ಸಾಗಿಸುತ್ತಿದ್ದನು. ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ಓಡಿ ಹೋಗುತ್ತಿದ್ದಾಗ ಬೆನ್ನಟ್ಟಿ ಹಿಡಿದು ವಿಚಾರಣೆಗೊಳಪಡಿಸಿದಾಗ ಕಳವು ಮಾಡಿದ್ದು ಬಯಲಿಗೆ ಬಂದಿದೆ.

ಆರೋಪಿ ಪಟ್ಟಣದ ರುದ್ರಪ್ಪ ಬಡಾವಣೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಹಸುಗಳನ್ನು ಕಳವು ಮಾಡಿರುವುದಾಗಿ ದೃಢಪಟ್ಟಿದೆ.  ಇವುಗಳ ಮೌಲ್ಯ ಅಂದಾಜು ₹ 2 ಲಕ್ಷ. ಹಸು ಮತ್ತು ಕರುಗಳನ್ನು ಠಾಣೆಯ ಆವರಣದಲ್ಲಿ ಕಟ್ಟಿ ಹಾಕಲಾಗಿತ್ತು.

ಬೆಳಿಗ್ಗೆ ಹಸುಗಳ ಮಾಲೀಕರಾದ ಗುರುಸ್ವಾಮಿ, ಕಾಶಿ ಹಸುಗಳು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲು ಠಾಣೆಗೆ ಬಂದಾಗ ಠಾಣೆಯ ಆವರಣದಲ್ಲಿ ಹಸುಗಳನ್ನು ಕಟ್ಟಿ ಹಾಕಿರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ.

ಠಾಣೆಯ ಆವರಣದಲ್ಲೇ ಹಾಲು ಕರೆದರು: ಠಾಣೆಯ ಬಳಿ ತಮ್ಮ ಹಸುಗಳನ್ನು ಕಂಡು ಸಂತಸಗೊಂಡ ಮಾಲೀಕರಿಗೆ ಪೊಲೀಸರು ಹಸುಗಳು ಹಾಲು ಕರೆಯುವ ಸಮಯವಾದ್ದರಿಂದ ಕೂಗುತಿದ್ದು, ಠಾಣೆಯ ಆವರಣದಲ್ಲೇ ಹಾಲು ಕರೆಯಲು ಅವಕಾಶ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !