ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಪ್ರಭಾವ: ಹಾಪ್‌ಕಾಮ್ಸ್‌ನಲ್ಲಿ ಭರ್ಜರಿ ವ್ಯಾಪಾರ

ದುಪ್ಪಟ್ಟಾದ ಮಾರಾಟ, ಸಂಘದ ಸದಸ್ಯರಿಂದ ಭರಪೂರ ಖರೀದಿ
Last Updated 5 ಏಪ್ರಿಲ್ 2020, 9:50 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ವೈರಸ್‌ ಹಲವು ಕ್ಷೇತ್ರಗಳ ಮೇಲೆ ಮಾರಕ ಪರಿಣಾಮ ಬೀರಿರುವ ಈ ಹೊತ್ತಿನಲ್ಲಿ ‘ಹಾಪ್‌ಕಾಮ್ಸ್‌’ ಮಾತ್ರ ಭರ್ಜರಿ ಲಾಭ ಗಳಿಕೆಯತ್ತ ಹೆಜ್ಜೆ ಇಟ್ಟಿದೆ.

ಒಂದೆಡೆ ಎಪಿಎಂಸಿಯಲ್ಲಿ ತರಕಾರಿಗಳಿಗೆ ಒಳ್ಳೆಯ ಬೆಲೆ ಇಲ್ಲ ಎಂದು ರೈತರು ಪರಿತಪಿಸುತ್ತಿದ್ದರೆ, ಮತ್ತೊಂದೆಡೆ ‘ಹಾಪ್‌ಕಾಮ್ಸ್‌’ ಸದಸ್ಯರು ತಮ್ಮ ಉತ್ಪನ್ನಗಳಿಗೆ ಸೃಷ್ಟಿಯಾದ ಉತ್ತಮ ಬೇಡಿಕೆಯಿಂದ ನಿರಾಳರಾಗಿದ್ದಾರೆ.

ನಗರದ ಬಹುತೇಕ ಜನರೂ ಇದೀಗ ತರಕಾರಿ ಮತ್ತು ಹಣ್ಣುಗಳನ್ನು ಖರೀದಿಸಲು ‘ಹಾಪ್‌ಕಾಮ್ಸ್’ ಮಳಿಗೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ದಿನವೊಂದಕ್ಕೆ 7ರಿಂದ 8 ಟನ್‌ನಷ್ಟು ತರಕಾರಿ ಮತ್ತು ಹಣ್ಣುಗಳ ಮಾರಾಟ ಮಾಡುತ್ತಿದ್ದ ಹಾಪ್‌ಕಾಮ್ಸ್‌ನಲ್ಲಿ ಇದೀಗ ದಿನವೊಂದಕ್ಕೆ 16ರಿಂದ 17 ಟನ್‌ನಷ್ಟು ಹಣ್ಣು, ತರಕಾರಿಗಳು ವ್ಯಾಪಾರವಾಗುತ್ತಿವೆ. ಇದು ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ (ಹಾಪ್‌ಕಾಮ್ಸ್)ದ ಸದಸ್ಯರಿಗೆ ಸಂತಸ ತರಿಸಿದೆ.

ನಗರದಲ್ಲಿ 41 ಹಾಪ್‌ಕಾಮ್ಸ್‌ ಮಳಿಗೆಗಳು ಇವೆ. ಇದರೊಂದಿಗೆ ಪಾಲಿಕೆಯ 10 ವಾಹನಗಳಲ್ಲಿ ಜನರ ಮನೆ ಬಾಗಿಲಿಗೆ ತರಕಾರಿ ಮತ್ತು ಹಣ್ಣು ವ್ಯಾಪಾರ ಮಾಡುವ ಪ್ರಕ್ರಿಯೆ ಒಂದು ವಾರದಿಂದ ನಡೆಯುತ್ತಿದೆ. ಇದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ‘ಹಾಪ್‌ಕಾಮ್ಸ್’ ಇಷ್ಟೊಂದು ಪ್ರಗತಿಯನ್ನು ದಾಖಲಿಸಿರಲಿಲ್ಲ. ಉತ್ತಮ ಗುಣಮಟ್ಟದ ತರಕಾರಿ ಮತ್ತು ಹಣ್ಣುಗಳಿಗೆ ಹೆಸರುವಾಸಿಯಾದ ಇದು ಈಗ ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT